ನವದೆಹಲಿ, ಡಿ 25 (Daijiworld News/PY) : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯನ್ನು ಅಂಗೀಕರಿಸಿದ ಕೇಂದ್ರ ಸರ್ಕಾರ ಮಿಲಿಟರಿ ಸುಧಾರಣೆಯ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಂಗಳವಾರ ರಕ್ಷಣಾ ಮುಖ್ಯಸ್ಥರ ಹುದ್ದೆಯ ನೇಮಕಕ್ಕೆ ಅನುಮೋದನೆ ಕೊಟ್ಟಿದೆ.
ಕೇಂದ್ರ ಸಂಪುಟವು ಈ ಹುದ್ದೆ ನೇಮಕಕ್ಕೆ ಅನುಮೋದನೆ ನೀಡಿರುವುದರಿಂದ ರಕ್ಷಣಾ ನಿರ್ವಹಣೆ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ ಎಂದು ತಿಳಿದು ಬಂದಿದೆ.
ಕೇಂದ್ರ ಸಂಪುಟವು 4-ಸ್ಟಾರ್ ಜನರಲ್ ಶ್ರೇಣಿಯ ರಕ್ಷಣಾ ಮುಖ್ಯಸ್ಥರ ಹುದ್ದೆಯನ್ನು ಸೇವಾ ಮುಖ್ಯಸ್ಥರಿಗೂ ಸಮಾನ ವೇತನದೊಡನೆ ರಚಿಸಲು ಅನುಮೋದನೆ ನೀಡಿದ್ದು, ಇವರು ಮಿಲಿಟರಿ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ ಹಾಗೂ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ರಕ್ಷಣಾ ಮುಖ್ಯಸ್ಥರ ಹುದ್ದೆ ನೇಮಕಕ್ಕೆ 1999ರ ಯುದ್ಧದ ನಂತರ ರಚಿಸಲಾಗಿದ್ದ ಕಾರ್ಗಿಲ್ ಪರಿಶೀಲನಾ ಸಮಿತಿಯು ಬೇಡಿಕೆ ಇಟ್ಟಿತ್ತು, ಈ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಕ್ಷಣಾ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡುವಂತೆ ನಿರ್ಧಾರಿಸಿದ್ದರು.
ರಕ್ಷಣಾ ಮುಖ್ಯಸ್ಥ ಸಿಬ್ಬಂದಿ ಸಮಿತಿಯ ಖಾಯಂ ಅಧ್ಯಕ್ಷರಾಗಲಿದ್ದು, ಉಳಿದ ಮೂರು ಸೇನಾ ವಿಷಯಗಳನ್ನು ಒಳಗೊಂಡಂತೆ ರಕ್ಷಣಾ ಸಚಿವರ ಪ್ರಧಾನ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೂವರು ಸೇನಾ ಮುಖ್ಯಸ್ಥರು ತಮ್ಮ ಸೇವೆಗಳಿಗೆ ಸಂಬಂಧಿಸಿದಂತಂಹ ವಿಚಾರಗಳ ಕುರಿತು ಸಚಿವರಿಗೆ ಸಲಹೆ ನೀಡುವುದನ್ನು ಮುಂದುವರಿಸಲಿದ್ದಾರೆ. ರಕ್ಷಣಾ ಮುಖ್ಯಸ್ಥ ಸಿಬ್ಬಂದಿ ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿರುವ ರಕ್ಷಣಾ ಸ್ವಾಧೀನ ಮಂಡಳಿ ಮತ್ತು ಎನ್ಎಸ್ಎ ಅಧ್ಯಕ್ಷತೆಯ ರಕ್ಷಣಾ ಯೋಜನಾ ಸಮಿತಿಯ ಸದಸ್ಯರಾಗಲಿದ್ದಾರೆ.
ತರಬೇತಿ ಮತ್ತು ಸೇವೆಗಳಿಗೆ ಸಿಬ್ಬಂದಿಗಳನ್ನು ಹೊರತುಪಡಿಸಿ, ಬಂಡವಾಳ, ಸೇವೆಗಳಿಗೆ ಮೀಸಲಾದ ಖರೀದಿಗಳನ್ನು ಸಿಡಿಎಸ್ ನೋಡಿಕೊಳ್ಳಬೇಕು. ಸಿಡಿಎಸ್ ಮೂವರು ಸೇವಾ ಮುಖ್ಯಸ್ಥರ ಹೊರತಾಗಿ ಬೇರೆ ಯಾವುದೇ ಮಿಲಿಟರಿ ಆಜ್ಞೆಯನ್ನು ನಿರ್ವಹಿಸುವುದಿಲ್ಲ. ಸೈಬರ್ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತಂಹ ಮೂರು ಸೇನೆಗಳ ಆಡಳಿತವು ರಕ್ಷಣಾ ಮುಖ್ಯಸ್ಥ ಸಿಬ್ಬಂದಿಯ ಹತೋಟಿಯಲ್ಲಿರುತ್ತದೆ ಎಂದು ತಿಳಿದು ಬಂದಿದೆ.