ನವದೆಹಲಿ, ಡಿ 25 (Daijiworld News/PY) : ಸೈನಿಕರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿ, ಮಾನಸಿಕ ಆಘಾತಗಳನ್ನು ದೂರಮಾಡುವ ಸಲುವಾಗಿ ಮೇಜರ್ ಅನೂಪ್ ಮಿಶ್ರಾ ಅವರು ಇದೀಗ ಹೊಸ ಸಂಶೋಧನೆಯೊಂದನ್ನು ನಡೆಸಿ ಸೈ ಎನಿಸಿಕೊಂಡಿದ್ದಾರೆ.
ಗಡಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅನೂಪ್ ಮಿಶ್ರಾ ಅವರು ಧರಿಸಿದ್ದ ಬುಲೆಟ್ಪ್ರೂಫ್ ಜಾಕೆಟ್ಗೆ ಎಲ್ಲಿಂದಲೋ ಹಾರಿ ಬಂದ ಸ್ನೈಪರ್ ಗುಂಡು ತಗುಲಿತು. ಆದರೆ ಅದೃಷ್ಟವಶಾತ್ ಆ ಗುಂಡು ಅವರ ದೇಹವನ್ನು ಪ್ರವೇಶಿಸಲಿಲ್ಲ, ಬದಲಾಗಿ ಅವರಿಗೆ ಆಘಾತವಾಗಿತ್ತು. ಈ ವೇಳೆ ಅನುಭವಿಸಿದ ಆ ಆಘಾತವೇ ಅಮಿತ್ ಮಿಶ್ರಾ ಅವರಿಗೆ ಸೈನಿಕರನ್ನು ರಕ್ಷಿಸುವಂತಹ ಬಲಶಾಲಿ ಬುಲೆಟ್ಪ್ರೂಫ್ ಜಾಕೆಟ್ ಅನ್ನು ಸಂಶೋಧಿಸುವ ಅಲೋಚನೆ ಬಂದಿದ್ದು ಎನ್ನುತ್ತಾರೆ.
ಸೇನೆಯಲ್ಲಿ ನಡೆಸಿದ ಹಲವು ಪರೀಕ್ಷೆಗಳಲ್ಲಿ ತೇರ್ಗಡೆಯಾದ ಈ ಬಲಶಾಲಿ ಬುಲೆಟ್ಪ್ರೂಫ್ ಜಾಕೆಟ್ಗೆ 'ಸರ್ವತ್ರ' ಎಂದು ಹೆಸರಿಡಲಾಗಿದೆ. ಸೈನಿಕರ ದೇಹವನ್ನು ಸ್ನೈಪರ್ ಗುಂಡುಗಳ ದಾಳಿಯಿಂದ ರಕ್ಷಣೆ ಮಾಡುವಂಥ ಈ ಜಾಕೆಟ್ಗಳನ್ನು ಪುಣೆಯ ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಭಿವೃದ್ದಿಮಾಡಲಾಗಿದ್ದು, ಶೀಘ್ರವೇ ಈ ಜಾಕೆಟ್ಗಳ ಉತ್ಪಾದನೆಗೆ ಟೆಂಡರ್ ಕರೆಯುವಂತ ವಿಶ್ವಾಸವಿದೆ.
ಬುಲೆಟ್ಪ್ರೂಫ್ ಜಾಕೆಟ್ನ ಬಗ್ಗೆ ವಿವರಿಸಿ ಅನೂಪ್ ಮಿಶ್ರಾ, ಗಡಿಯಲ್ಲಿ ನಡೆಯುತ್ತಿದ್ದ ಕಾಯಾಚರಣೆಯ ಸಂದರ್ಭ ವೇಳೆ ನಾನು ಧರಿಸಿ ಬುಲೆಟ್ಪ್ರೂಫ್ ಜಾಕೆಟ್ನ ಮೆಲೆ ಗುಂಡು ಬಡಿದಿತ್ತು, ಆದರೆ ನನಗೆ ದೈಹಿಕ, ಗಾಯಗಳೇನು ಆಗಿಲ್ಲ, ಬದಲಾಗಿ ಆ ವೇಳೆ ನನಗೆ ಒಂದು ರೀತಿಯ ಮಾನಸಿಕ ಆಘಾತವಾಗಿತ್ತು, ಇದೇ ಕಾರಣದಿಂದ ನನಗೆ ಸೈನಿಕರಲ್ಲಿ ಇಂಥಹ ಆಘಾತಗಳನ್ನು ಕಡಿಮೆ ಮಾಡಿ, ಆತ್ಮ ವಿಶ್ವಾಸವನ್ನು ಹೆಚ್ಚಿಸುವ ನೂತನ ವಿನ್ಯಾಸದ ಹಾಗೂ ಹೆಚ್ಚಿನ ಸಾಮರ್ಥ್ಯವುಳ್ಳ ಬುಲೆಟ್ಪ್ರೂಫ್ ಜಾಕೆಟ್ ಅನ್ನು ನಿರ್ಮಿಸಬೇಕು ಎಂಬ ನಿರ್ಧಾರ ಮಾಡಿದ್ದು ಎಂದರು.
ನೂತನವಾಗಿ ರೂಪುಗೊಂಡ ಈ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಧರಿಸಿದರೆ ದೇಹಪೂರ್ತಿ ಆವರಿಸಿಕೊಳ್ಳುತ್ತದೆ, ಸುಮಾರು 10 ಮೀಟರ್ ಅಂತರದಿಂದ ಬರುವ ಸ್ನೈಪರ್ ಗುಂಡುಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ಜಾಕೆಟ್ ಹೊಂದಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸೇನಾ ತಾಂತ್ರಿಕ ಸಮಾವೇಶದಲ್ಲಿ ಮೇಜರ್ ಅನೂಪ್ ಮಿಶ್ರಾ ಅವರಿಗೆ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಪ್ರಸ್ತುತ ಸಾಲಿನ 'ಆರ್ಮಿ ಡಿಸೈನ್ ಬ್ಯೂರೋ ಎಕ್ಷಲೆನ್ಸ್ ಅರ್ವಾಡ್' ನೀಡಿ ಸನ್ಮಾನಿಸಿದೆ.
ಬುಲೆಟ್ ಪ್ರೂಫ್ ಜಾಕೆಟ್ ಬಗ್ಗೆ ಚಿಂತನೆ ನಡೆಸಿದ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು, ಗಡಿಯಲ್ಲಿ ಹಾಗೂ ಕಾಶ್ಮೀರ ಕಣಿವೆಯಲ್ಲಿ ಸ್ನೈಪರ್ ಗುಂಡುಗಳ ದಾಳಿ ಹೆಚ್ಚಾಗುತ್ತಿರುವುದರಿಂದ ಇಂಥಹ ಶಕ್ತಿಶಾಲಿ ಬುಲೆಟ್ ಪ್ರೂಫ್ ಜಾಕೆಟ್ ಅತ್ಯಗತ್ಯ ಎಂದು ತಿಳಿಸಿದ್ದಾರೆ.