ಮಹಾರಾಷ್ಟ್ರ, ಡಿ 25(Daijiworld News/MSP):ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಲಾಗುತ್ತಿದ್ದ ಭದ್ರತೆಯನ್ನು ತಗ್ಗಿಸಿ, ಇದೇ ಮಹಾರಾಷ್ಟ್ರ ಸಿಎಂ ಪುತ್ರ ಶಿವಸೇನಾ ಶಾಸಕ ಆದಿತ್ಯ ಠಾಕ್ರೆಯ ಭದ್ರತೆಯನ್ನು‘ಜೆಡ್’ ಕೆಟಗರಿಗೆ ಹೆಚ್ಚಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರ ಸಮಿತಿ ನಡೆಸಿದ ಭದ್ರತಾ ಬೆದರಿಕೆ ಗ್ರಹಿಕೆ ಸಮಿತಿಯ ವರದಿಯ ಹಿನ್ನಲೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. 90ಕ್ಕೂ ಪ್ರಮುಖ ವ್ಯಕ್ತಿಗಳ ಭದ್ರತೆ ಪರಿಶೀಲನೆ ನಡೆಸಲಾಗಿತ್ತು ಇದರರಲ್ಲಿ ನಲವತ್ತಕ್ಕೂ ಹೆಚ್ಚು ಮಂದಿ ವಿಐಪಿಗಳಿಗೆ ನೀಡಲಾಗಿರುವ ಭದ್ರತೆ ವಾಪಾಸ್ ಪಡೆಯಲಾಗಿದೆ. ಇನ್ನು ಕೆಲವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು ಹಲವು ಮಂದಿಗೆ ಹೊಸದಾಗಿ ಭದ್ರತೆ ನೀಡಲಾಗಿದೆ.
ಸಚಿನ್ ತೆಂಡೂಲ್ಕರ್ ಅವರಿಗೆ ‘ಎಕ್ಸ್’ ಕೆಟಗರಿ ಭದ್ರತೆಯನ್ನು ನೀಡಲಾಗುತ್ತಿತ್ತು. ಇದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಸಚಿನ್ ಹೊರಹೋದಾಗಲೆಲ್ಲಾ ಪೊಲೀಸ್ ಬೆಂಗಾವಲು ವ್ಯವಸ್ಥೆ ಇತ್ತು. ಇದೀಗ ಭದ್ರತಾ ಸಿಬ್ಬಂದಿಯನ್ನು ಹಿಂಪಡೆದಿದ್ದು, ಬೆಂಗಾವಲು ವ್ಯವಸ್ಥೆ ಮುಂದುವರಿಯಲಿದೆ.
ಇನ್ನು’ವೈ’ ಕೆಟಗರಿಯಲ್ಲಿದ್ದ ಶಾಸಕ ಆದಿತ್ಯ ಠಾಕ್ರೆ ಅವರಿಗೆ ಇನ್ನು ಮುಂದೆ ‘ಜೆಡ್‘ ಕೆಟಗರಿ ಭದ್ರತೆ ದೊರೆಲಿದೆ’ ಎಂದು ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದರು.
ಶರದ್ ಪವಾರ್ ಗೆ ’ಜೆಡ್ ಪ್ಲಸ್ ’ ಕೆಟಗರಿ ಭದ್ರತೆ ಮುಂದುವರಿಸಲಾಗಿದೆ. ಉಗ್ರ ಅಜ್ಮಲ್ ಕಸಬ್ ವಿರುದ್ಧ ವಾದ ಮಂಡಿಸಿದ ಹಿರಿಯ ವಕೀಲ ಉಜ್ವಲ್ ನಿಕ್ಕಂ ಅವರಿಗೆ ನೀಡಲಾಗಿದ್ದ ಜೆಡ್ + ದರ್ಜೆಯ ಭದ್ರತೆ ಕಡಿತಗೊಳಿಸಿ ‘ವೈ’ ಹಂತದ ಭದ್ರತೆ ನೀಡಲಾಗಿದೆ.ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ‘ವೈ+’ ಹಂತದ ಭದ್ರತೆಯಿಂದ ‘ಜೆಡ್’ದರ್ಜೆಗೆ ಏರಿಸಲಾಗಿದೆ