ನೋಯ್ಡಾ, ಡಿ 25(Daijiworld News/MB) : ನೋಯ್ಡಾ ನಗರದ ಎಲ್ಲಾ ಶಾಲಾ ಕಾಲೇಜುಗಳು ಡಿ. 23 ಮತ್ತು 24 ರಂದು ಮುಚ್ಚುವಂತೆ ಜಿಲ್ಲಾಧಿಕಾರಿ ಬಿ.ಎನ್. ಸಿಂಗ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರಕಟನೆ ಪ್ರಸಾರ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿನ್ನಲೆಯಲ್ಲಿ ಅವರ ಸ್ನೇಹಿತರು ತಮ್ಮ ಸಹಪಾಠಿಗಳ ತಪ್ಪನ್ನು ಕ್ಷಮಿಸುವಂತೆ ಕೋರಿ ಬಿ.ಎನ್ ಸಿಂಗ್ ಅವರ ಕಚೇರಿಯ ಮುಂದೆ ಕಿವಿಗೆ ಕೈ ಹಿಡಿದು ಬಸ್ಕಿ ತೆಗೆದಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ನಕಲಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಿದ ಸಿಂಗ್ ಅವರು ತಕ್ಷಣ ಇದು ವದಂತಿ, ಶಿಕ್ಷಣ ಸಂಸ್ಥೆಗಳನ್ನು , ಮುಚ್ಚುವಂತೆ ಕೋರಿ ಯಾವುದೇ ಆದೇಶವನ್ನು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅವರು ತಮ್ಮ ಟ್ವೀಟರ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ನಕಲಿ ಪತ್ರದ ಕುರಿತು ನಾನು ತಿಳಿದು ಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ನೋಯ್ಡಾದ ಸರಕಾರಿ ಶಾಲೆಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ರಿಮೈಂಡ್ ಹೋಂಗೆ ಕಳುಹಿಸಿದ್ದಾರೆ.