ನವದೆಹಲಿ, ಅ.28 (DaijiworldNews/AA): ಕೇಂದ್ರ ಸರ್ಕಾರವು ಪ್ರತಿದಿನ ಸಾವಿರಾರು ಪೋಸ್ಟ್ಗಳು ಮತ್ತು ಖಾತೆಗಳನ್ನು ತೆಗೆದುಹಾಕುತ್ತಿದೆ. ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಆ ಸಮಸ್ಯೆಗಳು ಮಾಯವಾಗುವುದಿಲ್ಲ ಎಂದು ಕೆಂದ್ರ ಸರ್ಕಾರದ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (ಸಿಎಜಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, "ಇನ್ಸ್ಟಾಗ್ರಾಂ ವಿರುದ್ಧದ ಈ ಕಠಿಣ ಕ್ರಮಗಳು ಫಲ ನೀಡುವುದಿಲ್ಲ! ಸರ್ಕಾರ ಪ್ರತಿದಿನ ಸಾವಿರಾರು ಟೀಕಾತ್ಮಕ ಪೋಸ್ಟ್ಗಳನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದೆ. ಆದರೆ ಅದೊಂದು ಮೂಲಭೂತ ಅಂಶವನ್ನು ಮರೆಯುತ್ತಿರುವಂತಿದೆ. ಇನ್ಸ್ಟಾಗ್ರಾಂ ಎಂಬುದು ಕೇವಲ ಒಂದು ವೇದಿಕೆಯಾಗಿದ್ದು, ಜನರು ಅಲ್ಲಿ ತಮ್ಮ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆ ಪ್ರಶ್ನೆಗಳ ಹಿಂದಿರುವ ಕಾರಣಗಳು ಸಾಮಾಜಿಕ ಜಾಲತಾಣಗಳ ವ್ಯಾಪ್ತಿಯನ್ನು ಮೀರಿದವು; ಹೀಗಾಗಿ, ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಆ ಸಮಸ್ಯೆಗಳು ಮಾಯವಾಗುವುದಿಲ್ಲ" ಎಂದು ತಿಳಿಸಿದ್ದಾರೆ.
"ವಾಸ್ತವದಲ್ಲಿ, ಈ ಸೆನ್ಸಾರ್ಶಿಪ್ (ನಿರ್ಬಂಧ) ಸರ್ಕಾರವು ಯಾರಿಗೆ ಉತ್ತರದಾಯಿ ಆಗಿರಬೇಕೋ, ಅಂತಹ ಜನರಲ್ಲೇ ಇನ್ನಷ್ಟು ಅಪನಂಬಿಕೆಯನ್ನು ಉಂಟುಮಾಡುವ ಅಪಾಯವನ್ನು ಹೊಂದಿದೆ" ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು "ಭಾರತದಲ್ಲಿ ಸಾವಿರಾರು ಇನ್ಸ್ಟಾಗ್ರಾಂ ಖಾತೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ಲಕ್ಷಾಂತರ ವಿಡಿಯೋಗಳನ್ನು ತೆಗೆದುಹಾಕಲಾಗಿದೆ" ಎಂದು ಅಶುತೋಷ್ ರಂಕಾ ಕೂಡ 'ಎಕ್' ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.