ಚೆನ್ನೈ, ಅ.28 (DaijiworldNews/AA): 13 ವರ್ಷಗಳ ನಂತರ ತಮಿಳುನಾಡು ರಾಜ್ಯಾದ್ಯಂತ ಆಟೋರಿಕ್ಷಾ ದರವನ್ನು ಹೆಚ್ಚಳ ಮಾಡಲಾಗಿದ್ದು, ಇದರನುಸಾರ ಸರ್ಕಾರವು ಪ್ರತೀ 1.8 ಕಿ.ಮೀ.ಗೆ 50ರೂ. ನಿಗದಿಪಡಿಸಿದೆ.

ಮೊದಲ 1.8 ಕಿಲೋಮೀಟರ್ಗಳಿಗೆ ಕನಿಷ್ಠ ದರವನ್ನು 50 ರೂ.ಗೆ ನಿಗದಿಪಡಿಸಲಾಗಿದೆ. ಬಳಿಕ ಪ್ರತಿ ಕಿಲೋಮೀಟರ್ಗೆ ಹೆಚ್ಚುವರಿಯಾಗಿ 25 ರೂ.ಗಳನ್ನು ವಿಧಿಸಲಾಗುತ್ತದೆ. 1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ.
ಸರ್ಕಾರವು ಘಾಟ್ ಪ್ರಯಾಣ ದರವನ್ನು ಕನಿಷ್ಠ ದರದ 1.2 ಪಟ್ಟು ಹೆಚ್ಚಿಸಿ, ಮೂಲ ದರ 60 ರೂ. ಹೆಚ್ಚುವರಿ ಘಾಟ್ ಪ್ರಯಾಣ ದರವನ್ನು ಪ್ರತಿ ಕಿಲೋಮೀಟರ್ಗೆ 30 ರೂ. ನಿಗದಿಪಡಿಸದೆ. ಪರಿಷ್ಕೃತ ದರಗಳ ಅಡಿಯಲ್ಲಿ, ರಾತ್ರಿ 10ರಿಂದ ಬೆಳಗ್ಗೆ 5ರವರೆಗಿನ ರಾತ್ರಿಯ ಪ್ರಯಾಣ ದರಗಳು ಸಾಮಾನ್ಯ ದರಕ್ಕಿಂತ 1.5 ಪಟ್ಟು ಹೆಚ್ಚಾಗಿರುತ್ತವೆ. ಪ್ರತಿ ನಿಮಿಷಕ್ಕೆ 1 ರೂ. ವೇಟಿಂಗ್ ಚಾರ್ಜ್ ಸಹ ನಿಗದಿಗೊಳಿಸಲಾಗಿದೆ.
ಬರೊಬ್ಬರಿ 13 ವರ್ಷಗಳ ನಂತರ ರಾಜ್ಯದಲ್ಲಿ ಆಟೋ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ದಿಢೀರ್ ಬೆಲೆ ಏರಿಕೆಯಿಂದ ಪ್ರಯಾಣಿಕರಿಗೆ ಹೊರೆಯಾಗುವ ಸಾಧ್ಯತೆಯಿದೆ. ಆದರೆ ಆಟೋ ಚಾಲಕರ ಹಿತಾಸಕ್ತಿಯ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.