ನವದೆಹಲಿ, ಡಿ 25 (Daijiworld News/PY) : ಭಾರತ ದೇಶದ ಆರ್ಥಿಕತೆಯು ವಿಪತ್ತಿನಲ್ಲಿದೆ, ಆದಷ್ಟು ಬೇಗ ಇದನ್ನು ಸರಿಪಡಿಸಿಕೊಳ್ಳಲು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಇಲ್ಲವಾದಲ್ಲಿ ಬಿಜೆಪಿ ಮುಕ್ತ ಭಾರತ ಎಂದಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಹಿರಿಯ ನಾಯಕ ರಾಜ್ಯಸಭಾ ಸದಸ್ಯ, ಡಾ. ಸುಬ್ರಮಣಿಯನ್ ಸ್ವಾಮಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ದೇಶದ ಆರ್ಥಿಕ ವ್ಯವಹಾರಗಳಿಗೆ ಕುರಿತಂತೆ ಪ್ರಧಾನ ಮಂತ್ರಿಗೆ ನರೇಂದ್ರ ಮೋದಿ ನೀಡುತ್ತಿರುವ ಸಲಹೆಯ ಬಗ್ಗೆ ಹೇಳಿದ ಡಾ. ಸ್ವಾಮಿ, ಪ್ರಧಾನಿಯನ್ನು ಸಲಹೆಗಾರರು ಕತ್ತಲೆಯಲ್ಲಿರಿಸಿದ್ದಾರೆ. ದೇಶದ ಆರ್ಥಿಕತೆಯನ್ನು ಸೂಕ್ತ ಮಾರ್ಗದಲ್ಲಿ ನಡೆಸುವಂತೆ ಮಾಡದಿದ್ದರೆ, ಬಿಜೆಪಿ ಮುಕ್ತ ಭಾರತ ಎಂಬುದು ಎದುರಾಗಲಿದೆ.ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕತೆಯ ಸ್ಥಿತಿಯ ಬಗ್ಗೆ ತಿಳಿದವರು ನಿಜಾಂಶವನ್ನು ಪ್ರಧಾನಿಯವರಿಗೆ ತಿಳಿಸುತ್ತಿಲ್ಲ, ಪ್ರಧಾನಮಂತ್ರಿಗಳಿಗೆ ಸಲಹೆ ನೀಡುವವರು ಯಾರು ಎಂಬುದು ನನಗೂ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆ ಡಾ. ಸುಬ್ರಮಣಿಯನ್ ಸ್ವಾಮಿ ಈ ಎಚ್ಚರಿಕೆ ನೀಡಿದ್ದು, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ವಿಫಲವಾಗಿದೆ, ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿ ಜಾರ್ಖಂಡ್ನಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ಹರಿಯಾಣದಲ್ಲಿ ಬಿಜೆಪಿಯ ಬೆಂಬಲದಿಂದ ಬಿಜೆಪಿ ಸರ್ಕಾರ ರಚಿಸಿದೆ ಎಂದು ತಿಳಿಸಿದ್ದಾರೆ.