ಮಂಗಳೂರು, ಡಿ 26 (Daijiworld News/MSP): ಕಂಕಣ ಸೂರ್ಯಗ್ರಹಣ ಅತ್ಯಂತ ಸುಂದರ ಪಾಕೃತಿಕ ವಿದ್ಯಾಮಾನಕ್ಕೆ ಕರ್ನಾಟಕ ಸಾಕ್ಷಿಯಾಗಿದೆ. ಸೂರ್ಯನನ್ನು ಚಂದ್ರ ಬಹುಭಾಗ ಮರೆಮಾಚುವ ಮೂಲಕ ಪ್ರಭಾವಲಯ ಬಹುತೇಕ ಮರೆಯಾಗಿ ಬಳೆಯಾಕೃತಿಯಲ್ಲಿ ಸೂರ್ಯ ಕಂಗೊಳಿಸುತ್ತಾಳೆ.
ಆದರೆ ವಿಚಿತ್ರವೆಂದರೆ ಸೂರ್ಯಗ್ರಹಣದ ವೇಳೆ ಹಲವರು ಅನೇಕ ರೀತಿಯ ಮೂಢನಂಬಿಕೆಗಳನ್ನು ಪಾಲಿಸುತ್ತಾರೆ. ಇಂದಕ್ಕೊಂದು ತಾಜಾ ಉದಾಹರಣೆ ಕಲಬುರ್ಗಿಯ ಘಟನೆ. ಮಕ್ಕಳು ಒಳ್ಳೆಯದಾಗಲಿ ಎಂದು ಪೋಷಕರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಡುವುದರ ಮೂಲಕ ವಿಚಿತ್ರ ಮೌಢ್ಯಾಚರಣೆ ಮಾಡಿದ್ದಾರೆ.
ಕಲಬುರ್ಗಿಯ ತಾಜ್ ಸುಲ್ತಾನಪುರ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಗ್ರಹಣದ ಸಂದರ್ಭದಲ್ಲಿ ಮಕ್ಕಳನ್ನು ಕುತ್ತಿಗೆಯವರೆಗೆ ಮಣ್ಣಿನಲ್ಲಿ ದೇಹ ಹೂತು ಹಾಕಿದ್ದಾರೆ. ಈ ರೀತಿ ಮಾಡುವುದರಿಂದ ಮಕ್ಕಳನ್ನು ಕಾಡುತ್ತಿರುವ ವಿಕಲಾಂಗ ಸಮಸ್ಯೆ ಶಾಶ್ವತವಾಗಿ ದೂರವಾಗಿ, ಅವರು ಸದೃಢರಾಗುತ್ತಾರೆ ಎಂಬ ನಂಬಿಕೆ ಪೋಷಕರದ್ದು.
ಹಲವಾರು ವರ್ಷಗಳಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಇಂತಹ ಮೌಢ್ಯಚರಣೆ ಪದ್ಧತಿ ಇಂದಿಗೂ ಹಾಗೆಯೇ ಮುಂದುವರೆದುಕೊಂಡು ಬಂದಿದೆ.