ನವದೆಹಲಿ, ಡಿ 26 (Daijiworld News/PY) : "ಜನರನ್ನು ಸರಿಯಾದ ಹಾದಿಯಲ್ಲಿ ನಡೆಸಿಕೊಂಡು ಹೋಗುವುದು ನಾಯಕತ್ವ" ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ರಾಜಧಾನಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ದೇಶದಾತ್ಯಂತ ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿರು ಹಿಂಸಾಚಾರ ಹಾಗೂ ಪ್ರತಿಭಟನೆಯ ಹಿನ್ನೆಲೆಯನ್ನು ಕುರಿತು ಮಾತನಾಡಿದ ಅವರು, "ಜನರನ್ನು ತಪ್ಪು ಮಾರ್ಗಕ್ಕೆಳೆದು ಹಿಂಸಾಚಾರ ಸೃಷ್ಟಿಸುವುದು, ಬೆಂಕಿ ಹಚ್ಚುವಂತೆ ಮಾಡುವುದು ನಾಯಕತ್ವವಲ್ಲ" ಎಂದು ಹೇಳಿದ್ದಾರೆ.
ಜನರನ್ನು ತಪ್ಪು ಮಾರ್ಗದಲ್ಲಿ ಕರೆದೊಯ್ಯುವುದರಿಂದ ನಗರಗಳಲ್ಲಿ ಹಿಂಸಾಚಾರ ಸೃಷ್ಟಿಸುತ್ತಿದ್ದಾರೆ, ವಿಶ್ವವಿದ್ಯಾಲಯಗಳು, ಕಾಲೇಜುಗಳು ವಿದ್ಯಾರ್ಥಿಗಳು ಒಂದುಗೂಡಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ, ಬೆಂಕಿ ಹಚ್ಚುತ್ತಿದ್ದಾರೆ, ಇದು ನಾಯಕತ್ವವಲ್ಲ, ನಾಯತ್ವ ಎಂಬುದು ಕಷ್ಟದ ಕೆಲಸ, ನೀವು ಯಾವುದೇ ಕೆಲಸಗಳನ್ನು ಮಾಡಲು ಮುಂದಾದಾಗ, ನಿಮ್ಮನ್ನು ನೋಡಿ ಸ್ಪೂರ್ತಿಯಾಗುವವರು ಸಾಕಷ್ಟು ಜನರಿದ್ದಾರೆ, ಜನರನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವವವರೇ ಉತ್ತಮ ನಾಯಕರು ಎಂದು ತಿಳಿಸಿದ್ದಾರೆ.