ಅಹಮದಾಬಾದ್, ಡಿ 27(Daijiworld News/PY) : ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಅಪರಾಧಿಗೆ ಶುಕ್ರವಾರ ಗುಜರಾತ್ ಹೈಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2018ರ ಅಕ್ಟೋಬರ್ ಸೂರತ್ನಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅನಿಲ್ ಯಾದವ್ ಎಂಬ ಆರೋಪಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. ಅತ್ಯಾಚಾರ ನಡೆದ ದಿನದಂದು ಮನೆಯಿಂದ ಮಗು ಕಾಣೆಯಾಗಿದ್ದು, ಮಗುವಿನ ಪೋಷಕರಿಗೆ ತಿಳಿದು ಹುಡುಕಾಟ ನಡೆಸಿದ ವೇಳೆ ಕಟ್ಟಡವೊಂದರಲ್ಲಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
ಮಗುವಿನ ಮೇಲೆ ಅತ್ಯಾಚಾರವೆಸಗಿದ ಆರೋಪಿ ಯಾದವ್ ಬಿಹಾರಕ್ಕೆ ಪರಾರಿಯಾಗಿದ್ದು, ಪೊಲೀಸರು ಬೀಸಿದ ಬಲೆ ಸಿಕ್ಕಿಹಾಕಿಕೊಂಡಿದ್ದ.
ಈ ಘಟನೆಯ ನಂತರ ಬಿಹಾರ, ಉತ್ತರಪ್ರದೇಶದಿಂದ ಗುಜರಾತ್ಗೆ ವಲಸೆ ಬಂದಿದ್ದ ಜನರ ಮೇಲೆ ದಾಳಿ ನಡೆದಿತ್ತು ಎಂದು ತಿಳಿದುಬಂದಿದೆ.
ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ನ ವಿಶೇಷ ನ್ಯಾಯಾಲಯವು ಕಳೆದ ವರ್ಷ ಯಾದವ್ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು, ಘಟನೆಯ ಬಗ್ಗೆ ವೈದ್ಯಕೀಯ ಪರೀಕ್ಷೆಯ ವರದಿ ಹಾಗೂ 38 ಸಾಕ್ಷಿಗಳನ್ನು ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ ಸಾಕ್ಷಿಗಳನ್ನು ಪೊಲೀಸ್ ತನಿಖಾಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.