ಪಶ್ಚಿಮ ಬಂಗಾಳ, ಡಿ 27 (DaijiworldNews/SM): ದೇಶದೆಲ್ಲೆಡೆ ಪೌರತ್ವ ವಿರೋಧದ ಕಿಚ್ಚು ಹೆಚ್ಚಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಮಾತ್ರ ಪೌರತ್ವದ ವಿರುದ್ಧ ಜನ ತೀವ್ರ ಆಕ್ರೋಶಿತರಾಗಿದ್ದಾರೆ. ಅಲ್ಲಿನ ಜನತೆಗೆ ಬೆಂಬಲವಾಗಿ ನಿಂತಿರುವ ಸಿಎಂ ಮಮತಾ ಬ್ಯಾನರ್ಜಿ, ನಾನು ಜೀವಂತವಾಗಿರುವವರೆಗೂ ಬಂಗಾಳದಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬರುವುದಿಲ್ಲ ಎಂದು ಗುಡುಗಿದ್ದಾರೆ.
ಪೌರತ್ವದ ಹೆಸರಲ್ಲಿ ದೇಶದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ದೇಶದಾದ್ಯಂತ ಸಿಎಎ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಮತಾ ಬೆಂಬಲ ಸೂಚಿಸಿದ್ದಾರೆ. 18ನೇ ವರ್ಷಕ್ಕೆ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ಭಾರತೀಯರು ಪಡೆಯುತ್ತಾರೆ. ಆದರೆ, ಇದೇ ಪ್ರಜಾಪ್ರಭುತ್ವ ದೇಶದಲ್ಲಿ ಅದೇ ವಿದ್ಯಾರ್ಥಿಗಳು ಪ್ರತಿಭಟಿಸುವ ಹಕ್ಕು ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಪ್ರತಿಭಟನೆ ಹಕ್ಕನ್ನು ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಬದುಕಿರುವವರೆಗೂ ಸಿಎಎ ಬಂಗಾಳದಲ್ಲಿ ಜಾರಿಗೆ ಬರುವುದಿಲ್ಲ. ಯಾರೂ ದೇಶ ಅಥವಾ ರಾಜ್ಯವನ್ನು ತೊರೆಯಬೇಕಾಗಿಲ್ಲ. ಬಂಗಾಳದಲ್ಲಿ ಯಾವುದೇ ಬಂಧನ ಕೇಂದ್ರ ಇರುವುದಿಲ್ಲ" ಎಂದು ಬ್ಯಾನರ್ಜಿ ಹೇಳಿದರು.