ಬಿಹಾರ, ಡಿ 28 (Daijiworld News/MB) : ಬಿಹಾರದ ಕಾಂಗ್ರೆಸ್ ಮುಖಂಡ ರಾಕೇಶ್ ಯಾದವ್ ಅವರನ್ನು ಬೆಳಿಗ್ಗೆ ೬:೩೦ ಗಂಟೆಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಕೇಶ್ ಯಾದವ್ನ ಅವರು ಮುಂಜಾನೆ ಸಿನೆಮಾ ರಸ್ತೆಯಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಯಾದವ್ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ವೈದ್ಯರು ಯಾದವ್ ಅವರು ಮೃತಪಟ್ಟಿರುವುದಾಗಿ ಖಾತರಿ ಪಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಘವ್ ದಯಾಲ್ ಮಾಧ್ಯಮಕ್ಕೆ ಹೇಳಿದ್ದಾರೆ.
ಯಾದವ್ ಅವರು ಪ್ರತಿದಿನ ಮುಂಜಾನೆ ಜಿಮ್ಗಾಗಿ ವರ ಮನೆಯಿರುವ ಮೀನಾಪುರ ಗ್ರಾಮದಿಂದ ಸಿನೆಮಾ ರಸ್ತೆಗೆ ತೆರಳುತ್ತಾರೆ ಎಂದು ತಿಳಿದು ಬಂದಿದೆ.
ಈ ಹತ್ಯೆಗೆ ಕಾರಣ ಏನೆಂದು ತಿಳಿದಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು. ಈ ಘಟನೆ ಸಂಬಂಧಿಸಿ ಆ ಪ್ರದೇಶದ ಆಸುಪಾಸಿನಲ್ಲಿರುವ ಸಿಸಿ ಟಿವಿಯನ್ನು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.