ಬೆಂಗಳೂರು, ಡಿ 27 (Daijiworld News/MSP): ಇನ್ನೆರಡು ದಿನದಲ್ಲಿ 2019ನೇ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ. ಯಾಕೆಂದರೆ ನೀವು ಈ ವರ್ಷ ಬರೆಯುವ ದಿನಾಂಕದಲ್ಲಿ ಸ್ವಲ್ಪ ಯಾಮಾರಿದರೂ ವಂಚಕರಿಗೆ ಹಬ್ಬವಾಗಿ ಪರಿಣಮಿಸಬಹುದು.
ಬ್ಯಾಂಕಿನ ವ್ಯವಹಾರ ಅಥವಾ ಪ್ರಮುಖ ದಾಖಲೆ ಪತ್ರಗಳಲ್ಲಿ ಸಹಿ ಹಾಕುವ ಸಂದರ್ಭ ಎಲ್ಲರೂ ಹೆಚ್ಚಾಗಿ ಅಂದಿನ ದಿನಾಂಕ ಬರೆಯುವುದು ಸಹಜ ಮತ್ತು ಕೆಲವೊಮ್ಮೆ ಅನಿವಾರ್ಯ ಕೂಡಾ. ಈ ವೇಳೆ ಅನೇಕರು ಮಾಡುವ ಸಾಮಾನ್ಯ ವಾಗಿ ವರ್ಷವನ್ನು ಶಾರ್ಟ್ ಕಟ್ನಲ್ಲಿ ಬರೆಯುತ್ತಾರೆ. ಉದಾಹರಣೆಗೆ 28/12/2019ರ ದಿನಾಂಕವನ್ನು 28/12/19 ಎಂದು ಬರೆಯುತ್ತಾರೆ. ಆದರೆ ಇನ್ಮುಂದೆ ಈ ಅಭ್ಯಾಸ ಬದಲಾಯಿಸುವುದು ಓಳಿತು. ಯಾಕೆಂದರೆ 2020ರ ವರ್ಷವನ್ನು 20 ಎಂದು ಶಾರ್ಟ್ಕರ್ಟ್ ಬರೆದರೆ ತೊಂದರೆಗೆ ಸಿಲುಕಬಹುದು.
2020ರಲ್ಲಿ ದಿನಾಂಕವನ್ನು ಉದಾಹರಣೆಗೆ, 31.01.2020 ಎಂದು ಪೂರ್ಣವಾಗಿ ಬರೆಯಬೇಕು. 31.01.20 ಎಂದು ಬರೆಯಬಾರದು.
ಈ ರೀತಿ 20 ಎಂದು ಬರೆದರೆ, ಅದನ್ನು 2000, 2019, 2016, 2010 ಕಳೆದುಹೋದ ದಿನಾಂಕಗಳಿಗೆ ಬೇಕಾದಂತೆ ತಿದ್ದಿಕೊಂಡು ದಾಖಲೆಗಳನ್ನು ದುರುಪಯೋಗ ಮಾಡಿ ಕೊಳ್ಳುವ ಸಾಧ್ಯತೆ ಇರಬಹುದು. ಆದ್ದರಿಂದ 2020 ನ್ನು ಪೂರ್ಣವಾಗಿ ನಮೂದಿಸಿದರೆ ಸುರಕ್ಷಿತವಾಗಿರಬಹುದು