ನವದೆಹಲಿ,ಡಿ 28 (Daijiworld News/MSP): ಹಿಂಸಾತ್ಮಕ ರೂಪದ ಪ್ರತಿಭಟನೆಗಳನ್ನು ತಡೆಯಲು ಭದ್ರತಾಪಡೆ ಇದೀಗ ಹೊಸ ರೂಪದ ಗಲಭೆ ನಿಗ್ರಹ ಶೀಲ್ಡ್ ಗಳ ಬಳಕೆಗೆ ಮುಂದಾಗಿವೆ ಎಂದು ವರದಿಗಳು ತಿಳಿಸಿವೆ. ಈ ವಿನೂತನ ಗಲಭೆ ನಿಗ್ರಹ ಶೀಲ್ಡ್ ಗಳನ್ನು ಶುಕ್ರವಾರ ದೆಹಲಿಯಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ಅರೆಸೇನಾ ಪಡೆಗಳು ಬಳಸಿವೆ ಎಂದು ವರದಿಯಾಗಿದೆ.
ಇದೇನಿದು ಹೊಸ ಗಲಭೆ ನಿಗ್ರಹ ಶೀಲ್ಡ್ ?
ಇದುವರೆಗೆ ಆರ್'ಪಿಎಫ್ ಸಿಬ್ಬಂದಿಗಳು, ಕರ್ತವ್ಯ ನಿರತ ಪೊಲೀಸರು, ಪ್ರತಿಭಟನಕಾರರನ್ನು ಹತ್ತಿಕಲು ಪಾಲಿಕಾರ್ಬೋನೆಟ್ ಶೀಲ್ಡ್ ಗಳನ್ನು ಬಳಕೆ ಮಾಡುತ್ತಿತ್ತು. ಪರ್ತಿಭಟನಕಾರರು ಎಸೆಯುತ್ತಿದ್ದ ಕಲ್ಲುಗಳನ್ನು ಇಂತಹ ಶೀಲ್ಡ್ ಗಳನ್ನು ಅಡ್ಡ ಹಿಡಿದು ಮುಂದೆ ಸಾಗುತ್ತಾ ಪ್ರತಿಭಟನಕಾರರು ಮುನ್ನುಗ್ಗದಂತೆ ಅಡ್ಡಗಟ್ಟಬಹುದಿತ್ತು. ಆದರೆ, ಇವುಗಳು ಅತ್ಯಂತ ಪರಿಣಾಮಕಾರಿಯಾಗೇನೂ ಇರಲಿಲ್ಲ.
ಆದರೆ ಇದೀಗ ಎಲೆಕ್ಟ್ರಿಕ್ ಶಾಕ್ ನೀಡಬಲ್ಲ ಶೀಲ್ಡ್ ಗಳನ್ನು ಆರ್'ಪಿಎಫ್ ಸಿಬ್ಬಂದಿಗೆ ನೀಡಲಾಗಿದೆ. ಈ ಶೀಲ್ಡ್ ಗಳಲ್ಲಿ ಸ್ವಿಚ್ ಗಳನ್ನು ನೀಡಲಾಗಿದೆ. ಇದರ ಒಂದು ,ಈ ಬದಿಯಲ್ಲಿ ಸ್ವಿಚ್ ಇದ್ದರೆ ಮತ್ತೊಂದು ಬದಿಯಲ್ಲಿ ಎಲೆಕ್ಟ್ರಿಕ್ ಸರ್ಕಿಟ್ ಇರುತ್ತದೆ. ಆದನ್ನು ಒತ್ತಿದರೆ ವಿದ್ಯುತ್ ಪ್ರವಹಿಸಿ ಮುಟ್ಟಿದವರಿಗೆ ವಿದ್ಯುತ್ ಶಾಕ್ ಹೊಡೆಯುತ್ತದೆ.
ಎಲೆಕ್ಟ್ರಿಕ್ ಶಾಕ್ ಶೀಲ್ಡ್ ಗಳನ್ನು ಸುಮಾರೂ 5 ಸೆಕೆಂಡ್ ಗಿಂತ ಹೆಚ್ಚಿನ ಕಾಲ ಸ್ಪರ್ಶಿಸಿದರೆ ಅವರಿಗೆ ವಿದ್ಯುತ್ ಶಾಕ್ ತಗುಲಿ ಒಮ್ಮೆಲೆ ಕುಸಿಯುತ್ತಾರೆ. ಈ ಶೀಲ್ಡ್ ನಲ್ಲಿ ಸುಮಾರು 12 ವ್ಯಾಟ್ ವಿದ್ಯುತ್ ಮಾತ್ರ ಪ್ರವಹಿಸುವ ಕಾರಣ, ಇದು ಮಾರಣಾಂತಿಕವಾಗಿರುವುದಿಲ್ಲ