ಬೆಂಗಳೂರು, ಡಿ 29 (Daijiworld News/MB) : ಶಾಸಕ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮಂದಾಗಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಸಾಹಿತಿಗಳು, ಬರಹಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್, ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಬಿ.ಶಿವಣ್ಣ ಹಾಗೂ ಪಾರ್ವತೀಶ ಬಿಳಿದಾಳೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು ಯೇಸು ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿರುವುದು ಅವರ ಸ್ವಂತ ನಿರ್ಧಾರ ಎಂದಿದ್ದಾರೆ.
ನಾವು ಶಿವಕುಮಾರ್ ಬೆಂಬಲಿಗರಲ್ಲ. ಆದರೆ ಜಾತ್ಯಾತೀತರಾಗಿ ಸರ್ವಧರ್ಮ ಸಮಭಾವದಿಂದ ನಡೆದುಕೊಳ್ಳುತ್ತಿರುವ ನಿಲುವಿಗೆ ಬೆಂಬಲಿಗರಾಗಿದ್ದೇವೆ. ಸಂಕುಚಿತ ಮನೋಭಾವದವರು ಈ ವಿಷಯದಲ್ಲಿ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.