ಬೆಂಗಳೂರು, ಡಿ 29 (Daijiworld News/MB) : "ಡಿಕೆ ಶಿವಕುಮಾರ್ ಅವರು ಓಲೈಕೆ ರಾಜಕಾರಣದಿಂದಾಗಿ ಯೇಸು ಪ್ರತಿಮೆಯನ್ನು ನಿರ್ಮಾನ ಮಾಡುತ್ತಿದ್ದಾರೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
"ನ್ಯಾಯ ಎಂಬುದು ಎಲ್ಲರಿಗೂ ಒಂದೇ, ಯಾರನ್ನೂ ಓಲೈಕೆ ಮಾಡುವ ಅಗತ್ಯವಿಲ್ಲ. ಡಿಕೆಶಿಯವರು ಪ್ರತಿಮೆ ಯೇಸುವಿನ ಪ್ರತಿಮೆ ಮಾಡಲು ಮುಂದಾಗಿರುವ ಸ್ಥಳ ಹಿಂದೂಗಳ ಪ್ರಮುಖ ಸ್ಥಳ, ಈ ಭೂಮಿಯಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುವುದು ಸರಿಯಲ್ಲ" ಎಂದು ತಿಳಿಸಿದ್ದಾರೆ.
ಸಿಎಎ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಸಿಎಎ ನಮ್ಮ ಹಿಂದೂ ಧರ್ಮದವರಿಗೆ ಮಾತ್ರ ಸಂಬಂಧ ಪಟ್ಟ ಕಾಯ್ದೆಯಾಗಿದೆ. ನಮ್ಮ ಧರ್ಮದವರಿಗೆ ಪಾಕಿಸ್ತಾನದಲ್ಲಿ ರಕ್ಷಣೆ ಇಲ್ಲ, ಅವರಿಗೆ ಇಲ್ಲ ವಸತಿ ನೀಡುವ ವ್ಯವಸ್ಥೆ, ವಿರೋಧ ಪಕ್ಷದವರು ಇದನ್ನೂ ವಿರೋಧ ಮಾಡುತ್ತಿದ್ದಾರೆ" ಎಂದರು.