ಲಕ್ನೋ, ಡಿ 29 (Daijiworld News/MB) : ಮೀರತ್ನಲ್ಲಿ ಕಳೆದ ಶುಕ್ರವಾರ ಕೋಮು ಹೇಳಿಕೆ ನೀಡಿದ ಪೊಲೀಸರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸೂಚಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಶುಕ್ರವಾರ ಮತ್ತೆ ಪ್ರತಿಭಟನೆ ಆರಂಭವಾಗಿದ್ದು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮೀರತ್ ಪೊಲೀಸ್ ಅಧೀಕ್ಷಕ ಅಖಿಲೇಶ್ ನಾರಾಯಣ್ ಸಿಂಗ್, ಇಬ್ಬರು ಮುಸ್ಲಿಂಮರನ್ನು ಉದ್ದೇಶಿಸಿ, "ನೀವು ಪಾಕಿಸ್ತಾನಕ್ಕೆ ಹೋಗಿ" ಎಂದು ಹೇಳಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರು ಈ ರೀತಿ ಹೇಳಿಕೆ ನೀಡಿದ್ದರೆ ಅದು ಖಂಡನೀಯ, ಈ ಹೇಳಿಕೆ ನೀಡಿದ ಪೊಲೀಸರ ಮೇಲೆ ತಕ್ಷಣವೇ ಕ್ರಮಕೈಗೊಳ್ಳಿ ಎಂದು ನಖ್ವಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಹಾಗೂ ಯಾವುದೇ ಗುಂಪು ಹಿಂಸಾಚಾರದ ಹೇಳಿಕೆ ನೀಡಿದರೆ ಅದು ಸ್ವೀಕಾರಕ್ಕೆ ಅರ್ಹವಾದದಲ್ಲ. ಹಿಂಸಾಚಾರ ಪ್ರಜಾಪ್ರಭುತ್ವ ದೇಶದ ಭಾಗವೂ ಅಲ್ಲ. ಪೊಲೀಸರು ಮುಗ್ಧ ಜನರಿಗೆ ತೊಂದರೆಯಾಗದಂತೆ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ.