ಅಹಮದಾಬಾದ್, ಡಿ 29 (Daijiworld News/MB) : ಅತ್ಯಾಚಾರ ಆರೋಪವನ್ನು ಹೊತ್ತಿರುವ ಸ್ವರ್ಯಘೋಷಿತ ದೇವಮಾನವ ನಿತ್ಯಾನಂದ ಅವರ ಅಹಮದಾಬಾದ್ನಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಆಶ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ನೆಲಸಮಗೊಳಿಸಲಾಗಿದೆ.
ಆಶ್ರಮಕ್ಕೆ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಭೂಮಿಯನ್ನು ಲೀಸ್ಗೆ ನೀಡಿದ ಹಿನ್ನಲೆಯಲ್ಲಿ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದರು. ಹಲವು ಕ್ರಿಮಿನಲ್ ಕೇಸ್ಗಳನ್ನು ಹೊಂದಿರುವ ನಿತ್ಯಾನಂದ ಅವರ ಆಶ್ರಮಕ್ಕೆ ಜಾಗವನ್ನುನ ಅಕ್ರಮವಾಗಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಪೊಲೀಸರು ತನಿಖೆ ನಡೆಸಿತ್ತು.
ದೇಶದಿಂದಲ್ಲೇ ಪರಾರಿಯಾಗಿರುವ ನಿತ್ಯಾನಂದನ ವಿರುದ್ಧ ವಿದೇಶಾಂಗ ನೀತಿಯ ಪ್ರಕಾರ ಕ್ರಮಕೈಗೊಳ್ಳುವಂತೆ ಗುಜರಾತ್ ಸರ್ಕಾರಕ್ಕೆ ಗೃಹ ಸಚಿವಾಲಯ ಸೂಚನೆ ನೀಡಿರುವ ಹಿನ್ನಲೆಯಲ್ಲಿ ನಿತ್ಯಾನಂದನಿರುವ ಜಾಗದ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ನಿತ್ಯಾನಂದ ಬೆಂಗಳೂರು ಮೂಲದ ದಂಪತಿಗಳ ಇಬ್ಬರು ಪುತ್ರಿಯರನ್ನು ಅಕ್ರಮ ಬಂಧನ ಮಾಡಿದ್ದಾನೆ ಎಂದು ಈ ದಂಪತಿಗಳು ಗುಜರಾತ್ ಹೈಕೋರ್ಟ್ನ ಮೊರೆಹೋಗಿದ್ದರು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ್ದು ಆಶ್ರಮದಿಂದ ನಾಲ್ವರು ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು.
ಆ ಬಳಿಕ ನಿತ್ಯಾನಂದ ಆಶ್ರಮದಿಂದ ನಾಪತ್ತೆಯಾಗಿದ್ದು ತಾನು ಇಕ್ವೇಡಿಯಾಂನ ದ್ವೀಪವನ್ನು ಖರೀದಿ ಮಾಡಿ ಪ್ರತ್ಯೇಕ ಕೈಲಾಸ ಎಂಬ ದೇಶವನ್ನು ನಿರ್ಮಾಣ ಮಾಡಿರುವುದಾಗಿ ವೆಬ್ಸೈಟ್ ಒಂದರಲ್ಲಿ ಅಪ್ಲೋಡ್ ಮಾಡಿದ್ದನು. ಆದರೆ ಅಲ್ಲಿನ ಸರಕಾರ ಇದನ್ನು ಅಲ್ಲಗಳೆದು ನಾವು ಯಾವುದೇ ಭಾಗವನ್ನು ಮಾರಾಟ ಮಾಡಿಲ್ಲ ಎಂದು ತಿಳಿಸಿತ್ತು.
ಈ ನಡುವೆ ನಿತ್ಯಾನಂದ ಅಕ್ರಮವಾಗಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪಾಸ್ಪೋರ್ಟ್ ನವೀಕರಣಕ್ಕೆ ಮಾಡದಂತೆ ಸೂಚಿಸಿದೆ.
2018ರಲ್ಲೇ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿತ್ತು. 2018ರ ಮಧ್ಯದಲ್ಲಿ ಪಾಸ್ಪೋರ್ಟ್ ನವೀಕರಣಕ್ಕೆ ರಾಮನಗರ ಪೊಲೀಸರಿಗೆ ಮನವಿ ಮಾಡಿದ್ದ. ಆದರೆ ಅಂದು ಎಸ್ಪಿಯಾಗಿದ್ದ ರಮೇಶ್ ಬಾನೋತ್ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಕೋರ್ಟ್ ಸಮನ್ಸ್ ನೀಡಿದ ನಂತರವೂ ಕೋರ್ಟ್ಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪಾಸ್ಪೋರ್ಟ್ ನವೀಕರಣಕ್ಕೆ ಪೊಲೀಸರು ಪರವಾನಗಿ ನೀಡಿರಲಿಲ್ಲ.
ವಿವಾದಗಳಿಂದಲ್ಲೇ ಹೆಸರು ಪಡೆದಿರುವ ಈ ಸ್ವಯಂ ಘೋಷಿತ ದೇವಮಾನವನ ಮೇಲೆ ಈ ಮೊದಲು ಅತ್ಯಾಚಾರ, ವಂಚನೆ ಮೊದಲಾದ ಪ್ರಕರಣಗಳು ದಾಖಲಾಗಿದ್ದು ಈ ಕುರಿತು ತನಿಖೆ ನಡೆಯುತ್ತಿದೆ.