ನವದೆಹಲಿ, ಡಿ 29 (Daijiworld News/MB) : ದೇಶಾದ್ಯಂತ ಪೌತರ್ವ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಈ ಕಾಯ್ದೆಗೆ ಬೆಂಬಲ ನೀಡಿದ ತಮ್ಮ ಪಕ್ಷದ ಶಾಸಕಿಯನ್ನು ಅಮಾನತು ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ತಿಳಿಸಿದ್ದಾರೆ.
ಬಿಎಸ್ಪಿ ಶಿಸ್ತುಬದ್ಧವಾಗಿರುವ ಪಕ್ಷ, ಪಕ್ಷದ ಸಂಸದರು ಹಾಗೂ ಶಾಸರಕು ಈ ಶಿಸ್ತನ್ನು ಉಲ್ಲಂಘನೆ ಮಾಡಿದರೆ ಅವರ ಮೇಲೆ ತಕ್ಷಣವೇ ಕ್ರಮಕೈಗೊಳ್ಳಲಾಗುತ್ತದೆ. ಈ ಕಾಯ್ದೆಯನ್ನು ಬೆಂಬಲ ಮಾಡಿದ ಪಥೇರಿಯಾ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಶಾಸಕಿ ರಮಾಭಾಯಿ ಪರಿಹಾರ್ನ್ನು ಅಮಾನತು ಮಾಡಲಾಗಿದೆ. ಅವರು ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಬಾಗವಹಿಸದಂತೆ ನಿಷೇಧ ಹೇರಲಾಗಿದೆ ಎಂದು ಮಾಯಾವತಿ ಟ್ವೀಟ್ ಮಾಡಲಾಗಿದೆ.
ಬಿಎಸ್ಪಿ ಪಕ್ಷ ಸಿಎಎ ದೇಶ ವಿಭಜನಕಾರಿ ಹಾಗೂ ಸಂವಿಧಾನ ವಿರೋಧಿ ಎಂದು ಆರಂಭದಲ್ಲೇ ಹೇಳಿತ್ತು, ಸಂಸತ್ತಿನಲ್ಲೂ ನಮ್ಮ ಪಕ್ಷ ಈ ಮಸೂದೆಯ ವಿರುದ್ಧ ಧ್ವನಿ ಎತ್ತಿತ್ತು. ನಾವು ಈ ಕಾಯ್ದೆಯನ್ನು ರಾಷ್ಟ್ರಪತಿಗಳು ಹಿಂಪಡೆಯಬೇಕೆಂದು ಆಗ್ರಹ ಮಾಡಿದ್ದೆವು. ಹಾಗಿರುವಾಗ ರಮಾಬಾಯಿ ಈ ಕಾಯ್ದೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.