ಪುಣೆ, ಡಿ 29(Daijiworld News/PY) : "ಭಾರತದಲ್ಲಿರಲು ಇಚ್ಛಿಸುವವರಿಗೆ ಭಾರತ್ ಮಾತಾ ಕೀ ಜೈ ಎಂದು ಹೇಳುವುದನ್ನು ಕಡ್ಡಾಯಗೊಳಿಸಬೇಕಿದೆ" ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಎಬಿವಿಪಿಯ 54ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, "ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಅವರು ನಮ್ಮ ದೇಶಕ್ಕಾಗಿ ಅವರ ಜೀವನವನ್ನು ತ್ಯಾಗ ಮಾಡಿಲ್ಲ ಎಂದು ಭಾವಿಸುವ ಕೆಲ ಜನರು ಭಾರತವನ್ನು ಧರ್ಮಶಾಲೆಯನ್ನಾಗಿಸಲು ಮುಂದಾಗಿದ್ದಾರೆ" ಎಂದರು.
"ಭಾರತ ದೇಶದಲ್ಲಿ ಯಾರೇ ಬಂದರೂ ನೆಲೆಸಬಹುದಾಗಿದೆ, ಆದರೆ ಭಾರತದಲ್ಲಿ ಇರಲು ಇಚ್ಛಿಸುವವರು ಭಾರತ್ ಮಾತಾ ಕೀ ಜೈ ಎಂದು ಹೇಳುವುದು ಕಡ್ಡಾಯವಾಗಿದೆ, ಅಂತವರಿಗೆ ಮಾತ್ರ ಭಾರತದಲ್ಲಿ ಇರಲು ಅವಕಾಶ ಕೊಡಬೇಕಾಗಿದೆ, ನಾವು ಇದನ್ನು ಸ್ಪಷ್ಟಪಡಿಸಬೇಕು" ಎಂದು ತಿಳಿಸಿದ್ದಾರೆ.