ಹೈದರಾಬಾದ್, ಡಿ 30 (Daijiworld News/ MB) : ಅಪ್ರಾಪ್ತ ಬಾಲಕ ಮನೆಯಿಂದಲೇ ಹಣ ಕಳ್ಳತನ ಮಾಡಿ ಕೆಟಿಎಂ ಬೈಕ್ ಖರೀದಿ ಮಾಡಿದ್ದು ಪುತ್ರನಿಗೆ ಬೈಕ್ ಖರೀದಿ ಮಾಡಿದಕ್ಕೆ ಆತನ ತಂದೆ ಶೋರೂಂ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ರಸೂಲ್ಪುರ್ ನಿವಾಸಿಯಾಗಿರುವ 17 ವರ್ಷದ ಬಾಲಕನೋರ್ವ ಕೆಟಿಎಂ ಬೈಕ್ ಖರೀದಿ ಮಾಡಲು ಬೇಕಾಗಿ ಮನೆಯಲ್ಲಿದ್ದ 2 ಲಕ್ಷ ರೂ. ಕದಿದ್ದು ಆ ಬಳಿಕ 2.20 ಲಕ್ಷ ರೂ. ಮೌಲ್ಯದ ಬೈಕ್ ಖರೀದಿ ಮಾಡಿದ್ದ. ಆದರೆ ಈತ ಬೈಕ್ ಖರೀದಿ ಮಾಡಿ ನಾಲ್ಕು ತಿಂಗಳುಗಳು ಆದರೂ ಪೋಷಕರಿಗೆ ಈ ಕುರಿತು ಯಾವುದೇ ಮಾಹಿತಿ ತಿಳಿದಿರಲಿಲ್ಲ.
ಮನೆಯಲ್ಲಿ ಈ ಕುರಿತು ತಿಳಿಯಬಾರದೆಂದು ಈ ಬಾಲಕನ್ನು ಬೈಕನ್ನು ಹಾಸ್ಟೆಲ್ ಹಾಗೂ ಸ್ನೇಹಿತರ ಮನೆಯಲ್ಲಿ ಇಡುತ್ತಿದ್ದು ಆದರೆ ಶನಿವಾರ ಬೈಕ್ ಚಲಾವಣೆ ಮಾಡುವಾಗ ಅಪಘಾತವಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಈ ಸಂದರ್ಭದಲ್ಲಿ ಪೋಷಕರು ಪುತ್ರನ ಸ್ನೇಹಿತರನ್ನು ವಿಚಾರಣೆ ಮಾಡಿದ್ದು ಪುತ್ರ ಬೈಕ್ ಖರೀದಿ ಮಾಡಿರುವುದು ತಿಳಿದು ಬಂದಿದ್ದು ಅಪ್ರಾಪ್ತ ಪುತ್ರನಿಗೆ ಬೈಕ್ ನೀಡಿದ್ದಕ್ಕೆ ಬಾಲಕನ ಪೋಷಕರು ಶೋರೂಂನ ಇಬ್ಬರು ಸಿಬ್ಬಂದಿಯನ್ನು ಥಳಿಸಿ, ಅಲ್ಲಿಯೇ ಪ್ರತಿಭಟನೆ ಮಾಡಿದ್ದಾರೆ. ಹಾಗೆಯೇ ಶೋರೂಂ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕನು ಮನೆಯಿಂದ ಕದ್ದ ಹಣದಿಂದ ಬೈಕ್ ಖರೀದಿ ಮಾಡಿದ್ದು ಮಾತ್ರವಲ್ಲದೇ ತನ್ನ ಸಹೋದರನ ದಾಖಲೆಗಳನ್ನು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.