ಲಖನೌ, ಡಿ 30 (Daijiworld News/ MB): ಲಖನೌ ಟ್ರಾಫಿಕ್ ಪೊಲೀಸರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋದ ವ್ಯಕ್ತಿಗೆ ₹6,300 ದಂಡ ವಿಧಿಸಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ನಡೆಸಿ ಬಂಧನವಾದ ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದರಪುರಿ ಅವರ ನಿವಾಸಕ್ಕೆ ಪ್ರಿಯಾಂಕಾ ಗಾಂಧಿ ಶನಿವಾರ ಕಾಂಗ್ರೆಸ್ ಮುಖಂಡ ಧೀರಜ್ ಗುಜ್ಜರ್ ಅವರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೂ ಪ್ರಿಯಾಂಕ ಗಾಂಧಿಗೂ ಚರ್ಚೆ ನಡೆದಿದ್ದು ಅಲ್ಲಿಂದ ಪೊಲೀಸರನ್ನು ತಪ್ಪಿಸಿ ಪ್ರಿಯಾಂಕ ಅವರು ಅಧಿಕಾರಿಯ ಮನೆಗೆ ಹೋಗಿದ್ದರು.
ಆ ಬಿಳಿಕ ಪ್ರಿಯಾಂಕ ಗಾಂಧಿಯವರು ಪೊಲೀಸ್ ಪೇದೆ ನನ್ನ ಕತ್ತನ್ನು ಹಿಡಿದಿದ್ದು ಇನ್ನೊಬ್ಬರು ನನ್ನನ್ನು ತಳ್ಳಿದ್ದಾರೆ ಎಂದು ಆರೋಪ ಮಾಡಿದ್ದರು.
ಈಗ ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ ಮಾಡಿದ್ದಕ್ಕಾಗಿ ಇಲ್ಲಿನ ಪೊಲೀಸರು ಧೀರಜ್ ಅವರಿಗೆ ದಂಡ ವಿಧಿಸಿದ್ದಾರೆ.