ಪಶ್ಚಿಮ ಬಂಗಾಳ, ಡಿ 30 (Daijiworld News/ MB): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೆವ್ವ ಹಾಗಾಗಿ ರಾಮನಿಗೆ ಹೆದರುತ್ತಾರೆ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಉಪಾಧ್ಯಕ್ಷೆ ರಾಜ್ಕುಮಾರಿ ಕೇಶರಿ ಭಾನುವಾರ ಹೇಳಿದ್ದಾರೆ.
ಭಾನುವಾರ ಇಲ್ಲ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್ಯಾಲಿಯಲ್ಲಿ ಮಾತನಾಡಿದ ಅವರು, "ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಲು ಅರ್ಹರಲ್ಲ" ಎಂದರು.
ಮಮತಾ ಅವರು ದೆವ್ವ, ಹಾಗಾಗಿ ರಾಮನ ಹೆಸರು ಕೇಳಿದಾಗಲೆಲ್ಲಾ ಕಾರಿನಿಂದ ಇಳಿದು ಬಂದು ಜನರಿಗೆ ಸವಾಲು ಹಾಕುತ್ತಾರೆ. ಅವರು ರಾಮನಿಗೆ ಭಯ ಪಡುವ ಮಹಿಳಾ ದೆವ್ವ ಎಂದು ವ್ಯಂಗ್ಯ ಮಾಡಿದ್ದಾರೆ.