ಗುರುಗ್ರಾಮ್, ಡಿ 30(Daijiworld News/PY) : ಯುವತಿಯನ್ನು ಅಪಹರಿಸಲು ಪ್ರಯತ್ನಿಸಿ ವಿಫಲವಾದ ಕಾರಣ ಆಕೆಯ ಮೂಗನ್ನೇ ಅಪಹರಣಕಾರರು ಕತ್ತರಿಸಿದ ಘಟನೆ ಗುರುಗ್ರಾಮದ ಹಳ್ಳಿಯೊಂದರಲ್ಲಿ ನಡೆದಿದೆ.
ಚಾಕ್ಕಾರ್ಪುರ್ನ ಯುವತಿ ತನ್ನ ಮನೆಯಲ್ಲಿದ್ದ ಸಂದರ್ಭ ಮನೆಯೊಳಗೆ ಏಕಾಏಕಿ ನುಗ್ಗಿದ ಗೌರವ್ ಯಾದವ್, ಆಕಾಶ್ ಯಾದವ್, ಸತೀಶ್ ಯಾದವ್, ಮೋನು ಯಾದವ್ ಮತ್ತು ಲೀಲೂ ಯಾದವ್ ಯುವತಿಯನ್ನು ಮನೆಯಿಂದ ಹೊರಗೆಳೆದು ಅಪಹರಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿಯನ್ನು ಅಪಹರಿಸಲು ಬಂದ ಅಪಹರಣಕಾರರನ್ನು ತಡೆಯಲು ಯತ್ನಸಿದ್ದೇವೆ ಎಂದು ಯುವತಿಯ ಸಹೋದರ ತಿಳಿಸಿದ್ದಾರೆ. ಈ ಸಂದರ್ಭ ಮನೆಯೊಳಗಿನಿಂದ ಯುವತಿಯನ್ನು ಹೊರತರಲು ಆಗದೇ ಇದ್ದ ಕಾರಣ ಕೋಪಗೊಂಡ ಅಪಹರಣಕಾರರು ಆಕೆಯ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಯುವತಿಯನ್ನು ಅಪಹರಿಸಲು ಬಂದ ಅಪಹರಣಕಾರರು ಈ ಗ್ರಾಮದಲ್ಲಿನ ಬಲಿಷ್ಠ ವ್ಯಕ್ತಿಗಳಾಗಿದ್ದು, ರಾಜಾರೋಷವಾಗಿ ಎಲ್ಲರ ಕೊತೆ ಹೊಡೆದಾಡುತ್ತಾರೆ, ಇವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಹೆದರಿಸಿ ದೂರನ್ನು ವಾಪಾಸ್ ತೆಗೆದುಕೊಳ್ಳುವಂತೆ ಮಾಡುತ್ತಾರೆ, ಇದರಿಂದ ಈ ವ್ಯಕ್ತಿಗಳನ್ನು ಕಂಡರೆ ನಮಗೆ ಭಯ ಎಂದು ಯುವತಿಯ ಸಹೋದರ ದಿವೀನ್ ದಯಾಲ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಗುರ್ಗಾಂವ್ ಸೆಕ್ಟರ್ 29ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯೊಂದು ತಿಳಿಸಿದೆ.