ಬೆಂಗಳೂರು, ಡಿ 30(Daijiworld News/PY) : "ಗಡಿ ವಿವಾದ ಆರಂಭವಾದದ್ದು ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಆದ ನಂತರ" ಎಂದು ಶ್ರೀರಾಮುಲು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಉದ್ಭವ್ ಠಾಕ್ರೆ ಮುಖ್ಯಮಂತ್ರಿ ಆದ ಬಳಿಕ ಇಂತಹದ್ದೆಲ್ಲ ನಡೆಯುತ್ತಿದೆ, ಬಿಜೆಪಿ ಧ್ವಜಕ್ಕೆ ಬೆಂಕಿ ಹಚ್ಚಿ ಉದ್ದಟತನ ತೋರಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
"ಕರ್ನಾಟಕ ಸರ್ಕಾರ ಕೂಡ ಈ ವಿಚಾರದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಹೋರಾಟ ನಿರಂತರವಾಗಿ ನಡೆದಿದೆ. ನಾವು ಒಗ್ಗಟ್ಟಾಗಿ ನೆಲ ಜಲದ ಬಗ್ಗೆ ಹೋರಾಡುತ್ತೇವೆ. ದೇವೇಂದ್ರ ಫಡ್ನವಿಸ್ ಬೆಂಬಲದ ಬಗ್ಗೆಯೂ ನಾವು ಗಮನಿಸುತ್ತೇವೆ. ಕೇಂದ್ರದ ನಾಯಕರು ಈ ಬಗ್ಗೆ ಕಣ್ಣಿಟ್ಟಿದ್ದಾರೆ" ಎಂದರು.
"ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಶಿವಸೇನೆಯವರು ಬೇಕಾದರೆ ಕಾನೂನು ಹೋರಾಟ ಮಾಡಲಿ, ಆದರೆ,ಅವರು ಕೊಲ್ಲಾಪುರದಲ್ಲಿ ಸಿಎಂ ಬಿಎಸ್ವೈ ಪ್ರತಿಕೃತಿ ದಹನ ಮಾಡಿದ್ದು ಸರಿಯಲ್ಲ" ಎಂದು ತಿಳಿಸಿದ್ದಾರೆ.