ನವದೆಹಲಿ, ಡಿ 30(Daijiworld News/PY) : ದೇಶಾದ್ಯಂತ ಪೌರತ್ವ ಕಾಯ್ದೆಯ ವಿರುದ್ದ ತೀವ್ರವಾದ ಆಕ್ರೋಶಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನೂತನ ಸಿಎಎ ಕಾಯ್ದೆಗೆ ಬೆಂಬಲಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.
ಸಿಎಎ ಕಾಯ್ದೆಯ ಬಗ್ಗೆ ಅಭಿಯಾನ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವೀಟರ್ನಲ್ಲಿ #IndiaSupportsCAA ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನಕ್ಕೆ ಚಾಲನೆ ನೀಡಿ ಪೌರತ್ವ ಕಾಯ್ದೆಯನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.
ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ತಮ್ಮ ಟ್ವೀಟ್ನಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಕೆಲ ಪದಗಳಲ್ಲಿ ವಿವರಿಸಿದ್ದಾರೆ. ಪೌರತ್ವ ಕಾಯ್ದೆಯು ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುತ್ತದೆಯೇ ಹೊರತು ಯಾರಿಂದಲೂ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ನಮೋ ಆ್ಯಪ್ನಲ್ಲಿ ಈ ಹ್ಯಾಷ್ ಟ್ಯಾಗ್ ಅನ್ನು ನಿಮ್ಮ ಸ್ವಯಂ ಮಾದರಿಯ ವಾಯ್ಸ್ ಸೆಕ್ಷನ್ನಲ್ಲಿ ಕಂಟೆಂಟ್, ಗ್ರಾಫಿಕ್ಸ್, ವೀಡಿಯೋ ಅನ್ನು ಶೇರ್ ಮಾಡಿ ಮತ್ತು ಸಿಎಎಗೆ ನಿಮ್ಮ ಬೆಂಬಲ ನೀಡಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.