ಮುಂಬೈ, ಡಿ 30(Daijiworld News/PY) : ಭಾರತೀಯ ಮೂಲದ ಐರ್ಲೆಂಡ್ ಪ್ರಧಾನಿ ಲಿಯೋ ವರದ್ಕರ್ ಅವರ ಕುಟುಂಬದ ಸದಸ್ಯರೊಂದಿಗೆ ಭಾನುವಾರ ಮಹಾರಾಷ್ಟ್ರದ ಕರಾವಳಿ ಸಿಂಧುದುರ್ಗ್ ಜಿಲ್ಲೆಯಲ್ಲಿರುವ ತಮ್ಮ ಪೂರ್ವಜರ ಹಳ್ಳಿಗೆ ಭೇಟಿ ನೀಡಿದ್ದಾರೆ.
ಜೂನ್ 2017ರಲ್ಲಿ ಪ್ರಧಾನಿಯಾದ ಬಳಿಕ ಮಾಲ್ವನ್ ತಹಸಿಲ್ನ ವರದ್ ಅವರು ಗ್ರಾಮಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಗ್ರಾಮದ ದೇವತೆಯ ದೇವಾಲಯಕ್ಕೂ ಭೇಟಿ ನೀಡಿದ್ದಾರೆ. ಅವರ ಕುಟುಂಬದ ಮೂರು ತಲೆಮಾರುಗಳು ಒಟ್ಟುಗೂಡಿದ್ದರಿಂದ ಈ ಭೇಟಿ ವಿಶೇಷ ಕ್ಷಣ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಐರ್ಲೆಂಡ್ ಪ್ರಧಾನಿ, ನಾನು ನನ್ನ ಪತ್ನಿ, ಮಕ್ಕಳು ನನ್ನ ಪೋಷಕರು, ನನ್ನ ಸಹೋದರಿಯರ ಕುಟುಂಬಗಳು ಇಲ್ಲಿಗೆ ಭೇಟಿ ನೀಡಿದ್ದೇವೆ, ಆದ್ದರಿಂದ ಇಂದು ಒಂದು ದೊಡ್ಡ ಕುಟುಂಬವನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಹಿರಿಯವರಿದ್ದ ಸ್ಥಳಕ್ಕೆ ಭೇಟಿ ನೀಡಿದ್ದು ತುಂಬಾ ಸಂತೋಷವಾಗಿದೆ, ಈಗ ನಾನು ಇಲ್ಲಿಗೆ ಖಾಸಗಿಯಾಗಿ ಭೇಟಿ ನೀಡಿದ್ದು, ಈ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.