ಬೆಂಗಳೂರು, ಡಿ 31 (Daijiworld News/MB) : ಅಣ್ಣಾಮಲೈ ಮತ್ತು ಸಸಿಕಾಂತ್ ಸೆಂಥಿಲ್ ಇಬ್ಬರು ಸ್ವಯಂ ನಿವೃತ್ತಿ ತೆಗೆದುಕೊಂಡವರು ಆದರೆ ಇಬ್ಬರಲ್ಲೂ ಅದೆಷ್ಟು ವ್ಯತ್ಯಾಸ ಎಂದು ರಾಜ್ಯ ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಸಸಿಕಾಂತ್ ಸೆಂಥಿಲ್ ಎಡ ಪಂಥಿಯರಾಗಿದ್ದರೆ ಅಣ್ಣಾಮಲೈ ಬಲ ಪಂಥಿಯರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಸಚಿವ ಸುರೇಶ್ ಕುಮಾರ್ ಅವರು, "ಈ ಇಬ್ಬರೂ ಸ್ವಯಂ ನಿವೃತ್ತಿ ಪಡೆದು ಕೊಂಡವರು. ಇಬ್ಬರಿಗೂ ಅದೆಷ್ಟೋ ವರ್ಷಗಳ ಸೇವೆಯ ಅವಕಾಶವಿತ್ತು. ಆದರೆ ಇಬ್ಬರಲ್ಲೂ ಅದೆಷ್ಟು ವ್ಯತ್ಯಾಸ" ಎಂದು ಹೇಳಿದ್ದಾರೆ.
ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು ಕೆಲವರು ಅಣ್ಣಾಮಲೈ ಪರ ಹಾಗೆಯೇ ಇನ್ನು ಕೆಲವರು ಸೆಂಥಿಲ್ ಪರ ಉತ್ತರಿಸಿದ್ದಾರೆ.