ನವದೆಹಲಿ, ಡಿ 31 (Daijiworld News/PY) : ದೆಹಲಿಯ ಪ್ರಸಿದ್ದ ಪ್ರಗತಿ ಮೈದಾನ್ ಮೆಟ್ರೋ ನಿಲ್ದಾಣದ ಹೆಸರನ್ನು ಸುಪ್ರೀಂಕೋರ್ಟ್ ಮೆಟ್ರೋ ನಿಲ್ದಾಣ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮಂಗಳವಾರ ಘೋಷಿಸಿದೆ.
ಸುಪ್ರೀಂಕೋರ್ಟ್ ಮೆಟ್ರೋ ನಿಲ್ದಾಣ ಎಂಬ ನೂತನ ಹೆಸರಿಡಲು ಶೀಘ್ರವೇ ಸಾಧ್ಯವಿಲ್ಲ, ದೆಹಲಿ ಮೆಟ್ರೋ ವ್ಯವಸ್ಥೆಯಲ್ಲಿ ಒಂದು ತಿಂಗಳ ಅವಕಾಶ ಬೇಕು ಎಂದು ದೆಹಲಿ ಸರ್ಕಾರ ತಿಳಿಸಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮರುನಾಮಕರಣದ ವರದಿಯನ್ನು ಬಗ್ಗೆ ಈಗಾಗಲೇ ಘೋಷಣೆ ಮಾಡಲಾಗಿದೆ. ಪ್ರಗತಿ ಮೈದಾನ್ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆಗಾಗಿ ಸಾಕಷ್ಟು ಮನವಿಗಳು ಬಂದ ಹಿನ್ನೆಲೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಹೆಸರು ಮರುನಾಮಕರಣ ಮತ್ತು ಮೆಟ್ರೋ ಟ್ರೈನ್ ಆಡಿಯೋ ಅನೌನ್ಸ್ ಮೆಂಟ್ನ ಎಲ್ಲಾ ಪ್ರಕ್ರಿಯೆಗಳು ಒಂದು ತಿಂಗಳೊಳಗೆ ಮುಕ್ತಾಯಗೊಳ್ಳಲಿದೆ .ಅದೇ ರೀತಿ ಬಾದ್ರಾಪುರ್-ಮೆಹ್ರೂಲಿ ರಸ್ತೆಯ ಹೆಸರನ್ನು ಮರುನಾಮಕರಣ ಮಾಡುವುದಾಗಿ ತಿಳಿಸಿದರು.
ಅಲ್ಲದೇ ದ ಮುಕಾರ್ಬಾ ಚೌಕ್ ಮತ್ತು ಪ್ಲೈಓವರ್ ಹೆಸರನ್ನು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಚೌಕ್ ಎಂದು ಮರುನಾಮಕರಣ ಮಾಡಲಾಗುವುದು, ಬಾತ್ರಾ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದು, ಆ ಗೌರವಾರ್ಥ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.