ನವದೆಹಲಿ, ಜ 01 (Daijiworld News/MB) : ದೇಶದೆಲ್ಲೆಡೆ ಹೊಸವರ್ಷದ ಸಂಭ್ರಮಾಚರಣೆಯನ್ನು ಮಾಡಿ ಜನರು ಹೊಸ ವರ್ಷವನ್ನು ಸ್ವಾಗತ ಮಾಡಿದ್ದು ಹೊಸ ವರ್ಷಕ್ಕೆ ಪ್ರಧಾನ ಮಂತ್ರ್ಇ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ಹೊಸ ವರ್ಷಕ್ಕೆ ಶುಭಕೋರಿದ ಪ್ರಧಾನಿ, "ನವ ಭಾರತ ನಿರ್ಮಾಣಕ್ಕೆ 130 ಕೋಟಿ ಜನ ಕೈಜೋಡಿಸಬೇಕು. ನೀವು ಕೈಜೋಡಿಸುತ್ತೀರಿ ಎಂಬ ನಂಬಿಕೆ ನನಗಿದೆ. ಎಲ್ಲರಿಗೂ ಹೊಸವರ್ಷ ಹಾರ್ದಿಕ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಮುಖ್ಯಮಂತ್ರಿ ಬಿಎಸ್ಯಡಿಯೂರಪ್ಪ ಶುಭಕೋರಿ, "ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ಸುಖ, ಸಮೃದ್ಧಿ, ನೆಮ್ಮದಿಯ ವರ್ಷವಾಗಲಿ. ರಾಜ್ಯದಾದ್ಯಂತ ಸಂಭ್ರಮ ನೆಲೆಸಲಿ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವ ನಮ್ಮ ಸಂಕಲ್ಪಕ್ಕೆ ಆ ಭಗವಂತ ಮತ್ತಷ್ಟು ಬಲ ನೀಡಲಿ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು" ಎಂದು ಹೇಳಿದ್ದಾರೆ.