ನವದೆಹಲಿ, ಜ 01 (Daijiworld News/MB) : ರಾಜಕೀಯದಿಂದ ದೂರ ಉಳಿದ ಸರ್ಕಾರದ ನಿರ್ದೇಶನದ ಪಾಲನೆ ಮಾಡಲಾಗುವುದು ಎಂದು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ರಾವತ್ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹೂಗುಚ್ಛವವಿಡಟ್ಟು ಗೌರವ ಸಲ್ಲಿಸಿ ಬಳಿಕ ಮಾಧ್ಯಮದವರಲ್ಲಿ ಮಾತನಾಡಿ, "ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರ ಉಳಿದು ಸರ್ಕಾರದ ನಿರ್ದೇಶನಗಳನ್ನು ಮಾತ್ರ ಅನುಸರಣೆ ಮಾಡುತ್ತದೆ. ರಕ್ಷಣಾ ಇಲಾಖೆ ಮೂರು ಸೇನಾಪಡೆಗಳನ್ನು ಸಂಯೋಜನೆಗೊಳ್ಳುವಂತೆ ಮಾಡಿ, ಒಂದು ತಂಡದಂತೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಎಂದು ಹೇಳಿದರು.
ಈ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸರ್ಕಾರದ ಪರವಾಗಿ ಅವು ಮಾತನಾಡಿದ್ದು ಹಲವು ಜನರು ಟೀಕೆ ಮಾಡಿದ್ದರು.