ನವದೆಹಲಿ, ಜ.01 (Daijiworld News/MB) : ಹೊಸ ವರ್ಷವೂ ಇನ್ನಷ್ಟು ದುಬಾರಿಯಾಗಲಿದ್ದು, ರೈಲ್ವೆ ಪ್ರಯಾಣ ದರದ ಹೆಚ್ಚಳದ ಬಳಿಕ ಕೇಂದ್ರ ಸರ್ಕಾರ ಎಲ್ ಪಿ ಜಿ ಬೆಲೆಯನ್ನು ಏರಿಕೆ ಮಾಡಿದೆ.
ಸಬ್ಸಿಡಿ ರಹಿತ ಎಲ್ ಪಿ ಜಿ ದರವು ಏರಿಕೆಯಾಗಿದ್ದು ಇಂದಿನಿಂದ ಅದು ಜಾರಿಗೆ ಬರಲಿದೆ.
ದೆಹಲಿಯಲ್ಲಿ 695 ರೂ ಇದ್ದ ಸಬ್ಸಿಡಿ ರಹಿತ ಒಂದು ಎಲ್ಪಿಜಿ ಸಿಲಿಂಡರ್ ಬೆಲೆ ಈಗ 714 ರೂ.ಯಾಗಿದ್ದು 19ರೂ ಏರಿಕೆಯಾಗಿದೆ. ಹಾಗೆಯೇ ಮುಂಬೈನಲ್ಲಿ ಸಿಲಿಂಡರ್ಗೆ 665 ರೂ ಇದ್ದ ಬೆಲೆ ಈಗ 684 ರೂ.ಯಾಗಿದ್ದು 19.5 ರೂ. ಹೆಚ್ಚಳವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಕೋಲ್ಕತ್ತಾ ಮತ್ತು ಚೆನ್ನೈನಲ್ಲಿಯೂ ಗ್ಯಾಸ್ ಬೆಲೆಯಲ್ಲಿ ಏರಿಕೆಯಾಗಿದ್ದು ಕೋಲ್ಕತ್ತಾದಲ್ಲಿ 747 ರೂ.ಯಾಗಿದ್ದು 21.5 ರೂ. ಏರಿಕೆಯಾಗಿದೆ ಹಾಗೂ ಚೆನ್ನೈನಲ್ಲಿ 734 ರೂ.ಯಾಗಿದ್ದು 20 ರೂ. ಹೆಚ್ಚಳವಾಗಿದೆ.