ನವದೆಹಲಿ, ಜ 01 (Daijiworld News/MB) : ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯವು ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ವಶಕ್ಕೆ ಪಡೆಯಲಾಗಿರುವ ಆಸ್ತಿಗಳನ್ನು ಹರಾಜು ಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಬ್ಯಾಂಕುಗಳಿಗೆ ಅವಕಾಶ ನೀಡಿದೆ ಎಂದು ವರದಿಯಾಗಿದೆ.
ಈ ತೀರ್ಪು ಜನವರಿ 18ರ ನಂತರ ಜಾರಿಯಾಗಲಿದ್ದು ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದ ವಾದಿ, ಪ್ರತಿವಾದಿಗಳು ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ತೀರ್ಪನ್ನು ಪ್ರಶ್ನೆ ಮಾಡಬಹುದು.
ವಶಪಡಿಸಿಕೊಂಡ ಸ್ವತ್ತುಗಳುಮುಖ್ಯವಾಗಿ ಷೇರುಗಳಂತಹ ಹಣಕಾಸು ಭದ್ರತೆ ಕುರಿತ ದಾಖಲೆಗಳನ್ನು ಒಳಗೊಂಡಿದೆ ಎಂಬ ಮಾಹಿತಿ ಲಭಿಸಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ಹರಾಜು ಹಾಕಲು ಯಾವುದೇ ಆಕ್ಷೇಪವಿಲ್ಲ ಎಂದು ಇಡಿ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ತಿಳಿಸಿತ್ತು.
ಕಳೆದ ವರ್ಷ ಜನವರಿ 5 ರಂದು ಮಲ್ಯ ಅವರನ್ನು ದೇಶಭ್ರಷ್ಠಆರ್ಥಿಕ ಅಪರಾಧಿ ಎಂದು ವಿಶೇಷ ಪಿಎಂಎಲ್ಎ ನ್ಯಾಯಾಲಯವು ಘೋಷಣೆ ಮಾಡಿತ್ತು. ಹಾಗೆಯೇ ಅವರ ಆಸ್ತಿ ಮುಟ್ಟುಗೋಳು ಹಾಕಲು ನಿರ್ದೇಶನ ಮಾಡಿತ್ತು.
2016 ರ ಮಾರ್ಚ್ನಲ್ಲಿ ದೇಶದಿಂದ ಪಲಾಯನ ಆಗಿರುವ ಮಲ್ಯ ಯುನೈಟೆಡ್ ಕಿಂಗ್ಡಂನಲ್ಲಿ ವಾಸಿಸುತ್ತಿದ್ದಾರೆ.