ನವದೆಹಲಿ, ಜ 01 (DaijiworldNews/SM): ಇತ್ತೀಚಿಗಷ್ಟೇ ಕೇಂದ್ರ ಸರಕಾರ ಘೋಷಣೆ ಮಾಡಿದ್ದ ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ ಶೀಘ್ರದಲ್ಲೇ ಕಾರ್ಯಯೋಜನೆಗೆ ಬರಲಿದೆ. ಕರ್ನಾಟಕ ಸೇರಿದಂತೆ ಸುಮಾರು ಹನ್ನೆರಡು ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಹರ್ಯಾಣ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್ ಮತ್ತು ತ್ರಿಪುರಾ ರಾಜ್ಯಗಳು ಸೇರಿಕೊಂಡಿವೆ. ಒನ್ ನೇಶನ್, ಒನ್ ರೇಷನ್ ಕಾರ್ಡ್ ಯೋಜನೆ 2020ರ ಹೊಸ ವರ್ಷದೊಂದಿದೆ ಆರಂಭಗೊಂಡಿದೆ. ಶೀಘ್ರದಲ್ಲೇ ಏಕಸ್ವರೂಪದಲ್ಲಿ ಜಾರಿಗೆ ಬರಲಿದೆ.
ಪ್ರಸ್ತುತ ಈ ಯೋಜನೆಗೆ ಒಳಪಡುವ ರಾಜ್ಯಗಳಲ್ಲಿ ಹಳೆಯ ಕಾರ್ಡ್ ಬಳಸಿಕೊಂಡೇ ರೇಷನ್ ಪಡೆಯುವಂತೆ ತಿಳಿಸಲಾಗಿದೆ. ಈ ವರ್ಷದ ಜೂನ್ ತಿಂಗಳಿಂದ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ.
ನೂತನ ರೇಷನ್ ಕಾರ್ಡ್ ಗಾಗಿ ಉತ್ತಮ ಗುಣಮಟ್ಟದ ವಿನ್ಯಾಸವನ್ನು ಒದಗಿಸುವಂತೆ ರಾಜ್ಯಗಳ ಬಳಿ ಸಲಹೆಗಳನ್ನು ಪಡೆಯಲಾಗುತ್ತಿದೆ. ಅದನ್ನು 2020ರ ಜೂನ್ 1ರಂದು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದೆ. ವಿವಿಧ ರಾಜ್ಯಗಳ ರೇಷನ್ ಕಾರ್ಡ್ ಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುಣಮಟ್ಟದ ವಿನ್ಯಾಸದಲ್ಲಿ ವಿತರಿಸಲಿವೆ ಎಂದು ವರದಿ ತಿಳಿಸಿದೆ.