ಚಿತ್ರದುರ್ಗ, ಜ 02 (Daijiworld News/MB) : ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಒಂದೇ ಮನೆಯ ಮೂವರು ಸಾವನ್ನಪ್ಪಿದ ಘಟನೆ ಗುರುವಾರ ಬೆಳಿಗ್ಗೆ ನಗರದ ಗಾರೇಹಟ್ಟಿ ಬಡಾವಣೆಯಲ್ಲಿ ನಡೆದಿದೆ.
ಈ ಸಿಲಿಂಡರ್ ಸ್ಪೋಟ ಗಾರೆಹಟ್ಟಿ ನಿವಾಸಿ, ಬಸ್ ಕಂಡಕ್ಟರ್ ಆಗಿದ್ದ ಅರುಣ್ ಎಂಬುವವರ ಮನೆಯಲ್ಲಿ ಸಂಭವಿಸಿದ್ದು, ಸ್ಫೋಟದಿಂದಾಗಿ ಅರುಣ್, ಅವರ ಪತ್ನಿ ಹಾಗೂ ಪುತ್ರಿ ಸಾವನ್ನಪ್ಪಿದ್ದಾರೆ.
ಅರುಣ್ (40), ಅವರ ಪತ್ನಿ ಲತಾ (35) ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಪುತ್ರಿ ಅಮೃತಾ(13) ಮೃತಪಟ್ಟವರು.
ಸ್ಫೋಟದಿಂದಾಗಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟುಹೋಗಿದ್ದು ಮೂರು ಜನರ ದೇಹವು ಅರೆಬೆರೆ ಸುಟ್ಟಿವೆ.
ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.