ನವದೆಹಲಿ, ಜ 02 (Daijiworld News/MSP): ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬುಧವಾರ ಸಭೆ ನಡೆಸಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ಪ್ರಕಾರ ಮಾರ್ಚ್ 1ರಿಂದ ಕೇಬಲ್ , ಡಿಟಿಎಚ್ ಬಿಲ್ ಇಳಿಕೆಯಾಗಲಿದೆ.
ಚಂದಾದಾರರಿಗೆ ಹೆಚ್ಚುತ್ತಿರುವ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಿದ್ದು ವಿತರಕರ ವೇದಿಕೆಯಲ್ಲಿ ಲಭ್ಯವಿರುವ ಎಲ್ಲಾ ಚಾನಲ್ಗಳಿಗೆ ಅಂದರೆ ಡಿಟಿಎಚ್, ಕೇಬಲ್ ಸಂಪರ್ಕ ಕಡಿತವಾಗದಂತೆ ಸಂಸ್ಥೆಗಳು ಪಡೆಯುತ್ತಿದ್ದ ಕಡ್ಡಾಯ ನೆಟ್ವರ್ಕ್ ಸಾಮರ್ಥ್ಯ ಶುಲ್ಕ ರೂ.130 ಗರಿಷ್ಟ ಬೆಲೆಯ ಮಿತಿಯನ್ನು ನಿಗದಿಪಡಿಸಿದೆ. ಇದಲ್ಲದೆ, ತಿಂಗಳಿಗೆ ತೆರಿಗೆಗಳನ್ನು ಹೊರತುಪಡಿಸಿ ಗರಿಷ್ಠ ರೂ.130 ಎನ್ಸಿಎಫ್ (ನೆಟ್ವರ್ಕ್ ಸಾಮರ್ಥ್ಯ ಶುಲ್ಕ) ದಲ್ಲಿ 200 ಚಾನೆಲ್ಗಳನ್ನು ಒದಗಿಸಲು ಟ್ರಾಯ್ ಆದೇಶಿಸಿದೆ.
ಡಿಪಿಒಗಳು (ವಿತರಣಾ ಪ್ಲಾಟ್ಫಾರ್ಮ್ ಆಪರೇಟರ್ಗಳು) ತಮ್ಮ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ಉಚಿತ ಚಾನೆಲ್ಗಳನ್ನು (ಫ್ರೀಟು ಏರ್) ನೀಡಲು ಸೇವಾ ಸಂಸ್ಥೆಗಳು ಗರಿಷ್ಠ 160 ರೂ.ಗಿಂತಲೂ ಹೆಚ್ಚು ಶುಲ್ಕ ಪಡೆಯುವಂತಿಲ್ಲ ಎಂದು ಟ್ರಾಯ್ ಮಿತಿ ವಿಧಿಸಿದೆ.
ಇನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಟಿವಿ ಸಂಪರ್ಕಗಳು ಕಾರ್ಯನಿರ್ವಹಿಸುತ್ತಿರುವ ಬಹು-ಟಿವಿ ಮನೆಗಳ ಸಂದರ್ಭದಲ್ಲಿ, ಅಪರೇಟರ್ ಗಳು ಎರಡನೇ ಮತ್ತು ಹೆಚ್ಚುವರಿ ಟಿವಿ ಸಂಪರ್ಕಗಳಿಗಾಗಿ ಘೋಷಿತ ಎನ್ಸಿಎಫ್ನ ಗರಿಷ್ಠ 40% ಶುಲ್ಕ ವಿಧಿಸಬಹುದು ಎಂದು ಹೇಳಿದೆ
ಮಾರ್ಚ್ 1, 2020 ರಿಂದ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿದ ನಿಬಂಧನೆಗಳ ಪ್ರಕಾರ ಗ್ರಾಹಕರು ಪ್ರಯೋಜನ ಪಡೆಯಬಹುದು ಎಂದು ಟ್ರಾಯ್ ಹೇಳಿದೆ.