ಕಲಬುರಗಿ, ಜ 3(Daijiworld News/MSP): ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿದ ಮದ್ಯ ವ್ಯಸನಿಯೋರ್ವ ಇದೀಗ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ರೋಹಿತಾ (4), ಪರ್ವಿತಾ (2) ತಂದೆಯಿಂದಲೇ ಕೊಲೆಯಾದ ದುರ್ದೈವಿಗಳು. ಸಂಜೀವ್ ಆಲಿಯಾಸ್ ಸಂಜು ಆಲಿಯಾಸ್ ಕುಮ್ಶೆಟ್ಟಿ ಮಕ್ಕಳನ್ನು ಕೊಲೆಗೈದ ಪಾಪಿ ತಂದೆ. ಪತ್ನಿಯ ಶೀಲದ ಬಗ್ಗೆ ಯಾವಾಗಲು ಸಂಶಯ ವ್ಯಕ್ತಪಡಿಸುತ್ತಿದ್ದ ಹೆಣ್ಣು ಮಕ್ಕಳಿಬ್ಬರು ತನಗೆ ಹುಟ್ಟಿಲ್ಲ ಎಂದು ಅನುಮಾನಿಸುತ್ತಿದ್ದ. ಗುರುವಾರ ಸಂಜೆ ಮದ್ಯಪಾನ ಮಾಡಿ ಪತ್ನಿಗೆ ತಿಳಿಯದಂತೆ ಮಕ್ಕಳಿಬ್ಬರನ್ನು ತಾಂಡಾದ ಖೀರುನಾಯಕ ಎಂಬುವರ ಹೊಲಕ್ಕೆ ಕರೆದೊಯ್ದು ವಿಷ ನೀಡಿ ಕೊಲೆಗೈದಿದ್ದಾನೆ.
ಹೈದರಾಬಾದ್ ನಲ್ಲಿ ಸಂಜು ಕೆಲಸ ಮಾಡುತ್ತಿದ್ದ ಇತ್ತೀಚಿಗೆ ತಾಂಡಾಕ್ಕೆ ಬಂದಿದ್ದ ಎನ್ನಲಾಗಿದೆ.
ಪೊಲೀಸರು ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.