ಚೆನ್ನೈ, ಜ.03 (Daijiworld News/PY): ಗಂಟಲಿನಲ್ಲಿ ಬೋಂಡದ ಚೂರು ಸಿಲುಕಿ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಚೆನ್ನೈನ ಚುಲೈಮೇಡು ಪ್ರದೇಶದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಪದ್ಮಾವತಿ (45) ಎಂದು ಗುರುತಿಸಲಾಗಿದೆ.
ಪದ್ಮಾವತಿ ತನ್ನ ತಾಯಿಯೊಂದಿಗೆ ಮನೆಯ ಪಕ್ಕದ ಹೋಟೆಲ್ಗೆ ಹೋಗಿದ್ದರು ಎನ್ನಲಾಗಿದೆ.
ಹೋಟೆಲ್ಗೆ ಹೋಗಿ ಬೋಂಡ ತಿನ್ನುತ್ತಿದ್ದ ವೇಳೆ ಗಂಟಲಿನಲ್ಲಿ ಸಿಲುಕಿದ್ದು, ಪದ್ಮಾವತಿ ಅವರು ಉಸಿರಾಡಲು ಕಷ್ಟಪಡುತ್ತಿದ್ದರು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.