ಬೆಂಗಳೂರು, ಜ 04 ( Dajiworld News/MB) : ದೇಶದ್ಯಾಂತ ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಂದು ಬೆಂಗಳೂರಿನಲ್ಲಿ 6 ಕಡೆ ಪ್ರತಿಭಟನೆ ನಡೆಯಲಿದ್ದು ಎಂದಿಗಿಂತ ಇಂದು ಇನ್ನೂ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ
ಶುಕ್ರವಾರ ಆಶಾ ಕಾರ್ಯಕರ್ತೆಯರ ಹಾಗೂ ಸಿಎಎ ವಿರುದ್ಧ ಪ್ರತಿಭಟನೆಯಿಂದಾಗಿ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು. ಇಂದು 6 ಪ್ರತಿಭಟನೆಗಳು ನಡೆಯುವುದರಿಂದ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆ ಇದೆ.
ಇಂದು ಫ್ರೀಡಂಪಾರ್ಕ್ ನಲ್ಲಿ ಸತ್ಯಾಗ್ರಹ ಸಂಘಟನೆಯಿಂದ, ಬನ್ನೇರುಘಟ್ಟ ಈದ್ಗಾ ಮೈದಾನದಲ್ಲಿ ಜಯನಗರ ಮಸೀದಿ ಫೆಡರೇಷನ್ ವತಿಯಿಂದ, ಸಂಜೆ ಟೌನ್ ಹಾಲ್ ಬಳಿ ಹಮ್ ಭಾರತ್ ಕೆ ಲೋಗೋ ಸಂಘಟನೆಯಿಂದ, ಮಹಾರಾಣಿ ಕಾಲೇಜಿನಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವತಿಯಿಂದ ಸಿಎಎ ಕುರಿತು ಚರ್ಚೆ, ಆರ್ ಟಿ ನಗರದ ಹೆಚ್ ಎಂಟಿ ಮೈದಾನದಲ್ಲಿ ಹೆಬ್ಬಾಳ ಸಾರ್ವಜನಿಕ ಶಾಂತಿ ಒಕ್ಕೂಟದಿಂದ ಪ್ರತಿಭಟನೆ, ಹೊಸೂರು ರಸ್ತೆಯ ಮೈದಾನದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಪೋರಂನಿಂದ ಪ್ರತಿಭಟನೆಳು ನಡೆಯಲಿದೆ.