ನವದೆಹಲಿ, ಜ 04(Daijiworld News/MSP): ನೀವು ವಿದೇಶಕ್ಕೆ ಪ್ರಯಾಸಕ್ಕಾಗಿ ಯೋಜಿಸುತ್ತಿರುವಾಗ ಆ ದೇಶ ವೀಸಾ ಪಡೆಯುವುದು ಕಷ್ಟಕರ ಕೆಲಸ. ಸಾಕಷ್ಟು ದಾಖಲೆ, ಅನುಮತಿಗಳ ಬಳಿಕ ವೀಸಾ ಕೈಸೇರುತ್ತದೆ. ಆದರೆ ವೀಸಾ ಇಲ್ಲದೇ ವಿದೇಶಿ ಪ್ರವಾಸ ಮಾಡಬಹುದು ಅದು ಮಲೇಷ್ಯಾ ಪ್ರವಾಸ.!
ಈ ವರ್ಷ ಅಂದರೆ 2020 ರಲ್ಲಿ ಭಾರತೀಯ ಮತ್ತು ಚೀನಾದ ಪ್ರವಾಸಿಗರು ಪ್ರವಾಸಿ ವೀಸಾ ಇಲ್ಲದೆ ಮಲೇಷ್ಯಾಕ್ಕೆ ಪ್ರಯಾಣಿಸಬಹುದು. ಪ್ರವಾಸಿಗರು ಎಲೆಕ್ಟ್ರಾನಿಕ್ ಟ್ರಾವೆಲ್ ನೋಂದಣಿ ಮತ್ತು ಮಾಹಿತಿ (ಇಎನ್ಟಿಆರ್ಐ) ಹೆಸರು ನೋಂದಾಯಿಸಿ ಮಲೇಷ್ಯಾಕ್ಕೆ 15 ದಿನಗಳವರೆಗೆ ಭೇಟಿ ನೀಡಬಹುದು.ಒಂದು ಬಾರಿ ನೋಂದಣಿಯಾದರೆ ಮೂರು ತಿಂಗಳೊಳಗೆ ಯಾವಾಗ ಬೇಕಾದರೂ ಮಲೇಷಿಯಾ ಪ್ರವಾಸ ಕೈಗೊಳ್ಳಬಹುದು.
ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಮಲೇಷ್ಯಾ ಸರ್ಕಾರ ಭಾರತ ಮತ್ತು ಚೀನಾಕ್ಕೆ ವೀಸಾ ರಿಯಾಯಿತಿಯನ್ನು ನೀಡಿದೆ. ಇದು ಜನವರಿ 1ರಿಂದ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಪ್ರವಾಸಿಗರು ಟ್ರಾವೆಲ್ ಏಜೆನ್ಸಿ ಮೂಲಕ ಹೆಸರನ್ನು ನೋಂದಾಯಿಸಬಹುದಾಗಿದೆ. ಈ ಯೋಜನೆಯಲ್ಲಿ ಮಲೇಷ್ಯಾ ಪ್ರವೇಶಿಸುವ ಪ್ರಯಾಣಿಕರು ಭಾರತಕ್ಕೆಹಿಂದಿರುವ ಅಥವಾ ಬೇರೆ ಯಾವುದೇ ದೇಶಕ್ಕೆ ನೇರ ಪ್ರಯಾಣ ವಿಮಾನ ಟಿಕೆಟ್ ಹೊಂದಿರಬೇಕು ಎಂದು ವರದಿ ತಿಳಿಸಿದೆ