ಅಸ್ಸಾಂ, ಜ 04(Daijiworld News/MSP): ಅಸ್ಸಾಂನಲ್ಲಿ ಹಿಂಸಾಚಾರವನ್ನು ಉಂಟುಮಾಡುವಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವಹಿಸಿರುವ ಪಾತ್ರ ವಹಿಸಿರುವ ವರದಿಗಳ ಮಧ್ಯೆ, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಿಎಫ್ಐನಂತಹ ಸಂಘಟನೆಗಳನ್ನು ನಿಷೇಧಿಸುವ ಅವಶ್ಯಕತೆ ಇದ್ದು ತನಿಖೆ ಪೂರ್ಣಗೊಂಡ ನಂತರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಪತ್ರ ಬರೆಯಲಿದೆ" ಎಂದು ಕ್ಯಾಬಿನೆಟ್ ಸಚಿವ ಪರಿಮಲ್ ಸುಕ್ಲಾಬೈದ್ಯಾ ಹೇಳಿದ್ದಾರೆ.
" ತನಿಖೆಯ ವೇಳೆ ಅಸ್ಸಾಂನ ಹಿಂಸಾಚಾರದಲ್ಲಿ ಪಿಎಫ್ಐನ ನೈಜ ಮುಖವು ಬಹಿರಂಗಗೊಳ್ಳಲಿದ್ದು, ತನಿಖೆಗೆ ಪೂರ್ಣವಾದ ಬಳಿಕ ಕೇಂದ್ರಕ್ಕೆ ವಿವರವಾದ ವರದಿಯನ್ನು ಕಳುಹಿಸುತ್ತೇವೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಿಎಫ್ಐ ಪಾತ್ರದ ಬಗ್ಗೆ ರಾಜ್ಯ ಸರ್ಕಾರವು ಕೆಲವು ಮಾಹಿತಿಯನ್ನು ಹೊಂದಿದ್ದರೂ, ತನಿಖೆ ಪೂರ್ಣಗೊಂಡ ನಂತರ ಅದರ ನಿಜವಾದ ಮುಖ ಬಹಿರಂಗವಾಗುತ್ತದೆ" .
" ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಭಾಷಣೆ ನಡೆಸಲು ಕೋಡ್ ವರ್ಡ್ ಯನ್ನು ಬಳಸುತ್ತಾರೆ. ಪ್ರಜಾಪ್ರಭುತ್ವ ದೇಶದಲ್ಲಿರುವಾಗ ಈ ಗುಪ್ತ ಭಾಷೆ ಏಕೆ ಬೇಕು? ಪಿಎಫ್ಐ ಏನನ್ನು ಸಾಧನೆ ಬಯಸುತ್ತದೆ? ಈ ಸಂಘಟನೆ ರೂಪುಗೊಂಡ ಉದ್ದೇಶ ಏನು" ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರವಷ್ಟೇ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು " ಅಸ್ಸಾಂನಲ್ಲಿ ಹಿಂಸಾಚಾರವನ್ನು ಉಂಟುಮಾಡುವಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಪಾತ್ರದ ಕುರಿತು ಎಲೆಕ್ಟ್ರಾನಿಕ್ ಸಾಕ್ಷ್ಯಗಳಿಗಾಗಿ ಸರ್ಕಾರ ಕಾಯುತ್ತಿದೆ. ಎಲೆಕ್ಟ್ರಾನಿಕ್ ಪುರಾವೆಗಳು ಹೊರಬಂದ ನಂತರ, ರಾಜ್ಯದಲ್ಲಿ ಪಿಎಫ್ಐ ಅನ್ನು ನಿಷೇಧಿಸಲು ಕೇಂದ್ರಕ್ಕೆ ಬರೆಯಲು ನಾವು ಕರೆ ನೀಡುತ್ತೇವೆ "ಎಂದು ಹೇಳಿಕೆ ನೀಡಿದ್ದರು.