ಹಾವೇರಿ, ಜ 04 ( Dajiworld News/MB) : ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ತಮಿಳು ನಾಡಿನ ನಂಬರ್ನಿಂದ ಬೆದರಿಕೆ ಕರೆ ಬಂದಿರುವುದು ನಿಜವಾಗಿದ್ದು ಈಶ್ವರಪ್ಪ ಅವರಿಗೆ ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, "ಈ ಬೆದರಿಕೆ ಕರೆಯು ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಬಂದಿದೆ ಎನ್ನಲಾಗಿದ್ದು ಈ ಕುರಿತು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲೆಡೆ ಸಿಎಎ ಪರವಾಗಿ ಹಾಗೂ ವಿರೋಧವಾಗಿ ಪ್ರತಿಭಟನೆಗಳು ನಡೆಯುತ್ತಲ್ಲೇ ಇದೆ. ಈ ಎರಡೂ ಕಡೆಯವರಿಗೆ ಶಾಂತಿಯಿಂದ ಪ್ರತಿಭಟನೆ ಮಾಡಲು ನಾವು ತಿಳಿಸಿದ್ದೇವೆ ಎಂದರು.
ಹಾಗೆಯೇ ಪ್ರಧಾನಿ ಮೋದಿಯವರ ಕುರಿತು ಮಾತನಾಡಿದ ಅವರು, "ಮೋದಿಯರಿಗೆ ನಮ್ಮ ರಾಜ್ಯದ ಮೇಲೆ ಕಾಳಜಿ ಇದ್ದು ಈ ಕುರಿತು ಮುಖ್ಯಮಂತ್ರಿಯವರ ಜೊತೆ ಮಾತನಾಡಿದ್ದಾರೆ. ಭರ ಬಂದ ಸಂದರ್ಭದಲ್ಲಿ ಅತಿ ಹೆಚ್ಚು ಹಣ ನೀಡಿದ್ದು ಮೋದಿಯವರು, ಪ್ರತಿಪಕ್ಷದವರು ಬಾಯಿಗೆ ಬಂದಂತೆ ಮಾತಾನಾಡುವುದು ಸರಿಯಲ್ಲ. ಈ ಕುರಿತು ನಾವು ಸದನದಲ್ಲೇ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ರಾಮುಲು ಅವರಿಗೆ ಡಿಸಿಎಂ ಸ್ಥಾನ ದೊರಕುತ್ತದೆಯೇ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಚಿವರು ಉತ್ತರಿಸಿಲ್ಲ.