ನವದೆಹಲಿ, ಜ 04(Daijiworld News/MSP): ಕಲುಷಿತ ಗಾಳಿಯಿಂದ ಕಂಗೆಟ್ಟ ದೆಹಲಿಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ದೆಹಲಿಯಲ್ಲಿ ಗಾಳಿ ಶುದ್ಧೀಕರಣ ಟವರ್ ಅವರನ್ನು ಉದ್ಘಾಟಿಸಿದ್ದು ಇದು ದೇಶದಲ್ಲಿ ಮೊತ್ತಮೊದಲ ಗಾಳಿ ಶುದ್ಧೀಕರಣ ಟವರ್ ಆಗಿದೆ.
ಜನನಿಬಿಡ ಪ್ರದೇಶವಾಗಿರುವ ದೆಹಲಿಯ ಲಜಪತ್ ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ 7 ಲಕ್ಷ ರೂ ವೆಚ್ಚದಲ್ಲಿ 20 ಅಡಿ ಎತ್ತರವಿರುವ ಗಾಳಿ ಶುದ್ಧೀಕರಣ ಟವರ್ ಸ್ಥಾಪಿಸಲಾಗಿದೆ. ಈ ಟವರ್ ಶೇ.೮೦ ರಷ್ಟು ವಾಯುಮಾಲಿನ್ಯ ನಿವಾರಿಸಲಿದೆ. ಇದರ ಸುತ್ತಲಿನ ೬೦೦ -೭೦೦ ಮೀಟರ್ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ಸಾಮರ್ಥ್ಯ ಈ ಟವರ್ ಗಿದೆ
ಲಜಪತ್ ನಗರದ ವರ್ತಕರ ಸಂಘವು ಸಂಸದ ಗೌತಮ್ ಗಂಭೀರ್ ಸಹಕಾರದೊಂದಿಗೆ ಈ ಟವರ್ ನಿರ್ಮಿಸಲಾಗಿದೆ. ಈ ಟವರ್ ನಿರ್ವಹಣೆಗೆ ವಾರ್ಷಿಕ 30 ಸಾವಿರ ರೂಪಾಯಿ ಬೇಕಾಗಿದ್ದು ಇದನ್ನು ವರ್ತಕರ ಸಂಘವೇ ಭರಿಸಲಿದೆ. ದಿನಕ್ಕೆ 2.50 ಲಕ್ಷದಿಂದ 6 ಲಕ್ಷ ಕ್ಯೂಬಿಕ್ ಗಾಳಿಯನ್ನು ಶುದ್ಧೀಕರಿಸಲಿದೆ.