ಕೋಲಾರ, ಜ.04 (Daijiworld News/PY) : "ಇಟಲಿಯಿಂದ ಬಂದವರಿಗೆ ಪೌರತ್ವ ನೀಡಿರುವ ದೇಶದಲ್ಲಿ ಬೇರೆಯವರಿಗೆ ನೀಡಬಾರದೇ, ಪೌರತ್ವ ಇಲ್ಲದವರಿಗೆ ಪೌರತ್ವ ನೀಡಲಾಗುವುದೇ ಹೊರತು ಪೌರತ್ವ ಇರುವವರ ಬಳಿ ಕಿತ್ತುಕೊಳ್ಳುವುದಿಲ್ಲ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, "ಮಹಾತ್ಮ ಗಾಂಧೀಜಿಯವರ ಆಸೆಯಂತೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಓಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸುಳ್ಳು ಸಂದೇಶವನ್ನು ರವಾನಿಸುತ್ತಿದ್ದಾರೆ" ಎಂದರು.
"ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮಹತ್ವವಿದೆ. ಭಾರತದಲ್ಲಿ ನರೇಂದ್ರ ಮೋದಿ ಅವರ ಶಕ್ತಿ ಬಲವಾಗಿದೆ. ಸಿಎಎಯನ್ನು ವಿರೋಧಿಸುವ ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ಸಾಹಿತಿಗಳ ಬಗ್ಗೆ ಮಾತನಾಡುವುದಿಲ್ಲ. ಸುಳ್ಳು, ಅಪಪ್ರಚಾರ ಮಾಡುವವರು ರಾಷ್ಟ್ರ ವಿರೋಧಿಗಳು" ಎಂದರು.