ಬೆಂಗಳೂರು, ಜ 04 (Dajiworld News/MB) : "ಎಸ್.ಎಂ.ಕೃಷ್ಣ ಅವರು ರಾಜಕೀಯ ಜೀವನ ಆರಂಭವಾಗಿದ್ದು ಕಾಲೇಜು ಯೂನಿಯನ್ ಚುನಾವಣೆಯಲ್ಲಿ, ಆ ಸಂದರ್ಭದಲ್ಲಿ ಅವರಿಗೆ ಹೆಚ್ಚು ಮತ ಹಾಕುತ್ತಿದ್ದವರು ಹುಡುಗಿಯರು ಹಾಗೆಯೇ ಅಮೆರಿಕಾದಲ್ಲಿ ಸುಂದರಿಯರು ಅವರ ಹಿಂದೆ ಕ್ಯೂ ನಿಲ್ಲುತ್ತಿದ್ದರು" ಎಂದು ಸುಪ್ರೀಂಕೋರ್ಟ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಎಸ್ ಎಂಕೆ ಕುರಿತ 5 ಪುಸ್ತಕಗಳು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, "ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುವಾಗ ಎಸ್ಎಂ ಕೃಷ್ಣ ಅವರು ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದರು. ಆದರೆ ಆ ಚುನಾವಣೆಯಲ್ಲಿ ಬರೀ 18 ಮತಗಳ ಅಂತರದಲ್ಲಿ ಸೋತಿದ್ದಾರೆ. ಅವರು ಸೋತರೂ ಒಂದು ಸಮಾಧಾನವಿತ್ತು ಯಾಕೆಂದರೆ ಇದ್ದ 101 ಹುಡುಗಿಯರ ಮತಗಳ ಪೈಕಿ 97 ಮತಗಳು ಎಸ್ಎಂ ಕೃಷ್ಣ ಅವರಿಗೆ ಹಾಕಿದ್ದರು" ಎಂದು ಹೇಳಿದ್ದಾರೆ.
"ಎಸ್ಎಂ ಕೃಷ್ಣ ಅವರು ಚಾರ್ಮಿಂಗ್ ಮ್ಯಾನ್ ಆಗಿದ್ದರು. ಅವರು ಚುನಾವಣೆಗೆ ನಿಂತರೆ ಹೆಚ್ಚಿನ ಹುಡುಗಿಯರು ಇವರಿಗೆ ಮತ ಹಾಕುತ್ತಿದ್ದರು. ಮಹಾರಾಜ ಕಾಲೇಜಿನಲ್ಲಿ ಅವರು ಚುನಾವಣೆಯಲ್ಲಿ ಸೋತರೂ 97 ಹುಡುಗಿಯರು ಮತ ಅವರಿಗೆ ಬಿದಿದ್ದೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ" ಎಂದು ಹಾಸ್ಯ ಮಾಡಿದ್ದಾರೆ.
"ಎಸ್ಎಂ ಕೃಷ್ಣ ಅವರು ಅಮೆರಿಕಾದಲ್ಲಿ ಇದ್ದಾಗ ಎಷ್ಟೋ ಸುಂದರಿಯರು ಅವರ ಹಿಂದೆ ಬಿದಿದ್ದರು. ಆದರೆ ಸ್ವತಃ ಎಸ್ಎಂ ಕೃಷ್ಣ ಹೇಳುವ ಪ್ರಕಾರ ಅವರು ಮಾತ್ರ ಲಕ್ಷ್ಮಣ ರೇಖೆ ದಾಟುತ್ತಿರಲಿಲ್ಲ" ಎಂದು ತಿಳಿಸಿದ್ದಾರೆ.
ಇನ್ನೂ ಹಾಸ್ಯ ಮಾಡುತ್ತಾ, "ಎಸ್ಎಂ ಕೃಷ್ಣ ಅವರು ಬಹಳ ಬುದ್ಧಿವಂತರು ತಾನು ಲಕ್ಷ್ಮಣ ರೇಖೆ ದಾಟಿಲ್ಲ ಎಂದು ಹೇಳಿದ್ದಾರೆ. ಆದರೆ ಆ ಸುಂದರಿಯರು ಲಕ್ಷ್ಮಣ ರೇಖೆ ದಾಟಿಲ್ಲ ಎಂದು ಹೇಳಿಲ್ಲ" ಎಂದು ಹಾಸ್ಯ ಮಾಡಿದರು.