ಪಂಜಾಬ್, ನ.11 (DaijiworldNews/AK): ಪಂಜಾಬ್ನ ರಾಜಪುರದ 22 ವರ್ಷದ ರಸ್ನೀತ್ ಕೌರ್, ಯಾವುದೇ ತರಬೇತಿಯಿಲ್ಲದೆ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ 51 ನೇ ರ್ಯಾಂಕ್ ಗಳಿಸುವ ಮೂಲಕ ಮಾದರಿಯಾಗಿದ್ದಾರೆ. ಪಿಎಸ್ಪಿಸಿಎಲ್ನಲ್ಲಿ ಲೈನ್ಮ್ಯಾನ್ನ ಮಗಳಾದ ಅವರು ಮನೆಯಲ್ಲಿ ಸ್ವಯಂ ಅಧ್ಯಯನದ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ.

ಪಂಜಾಬ್ನ ಪಟಿಯಾಲ ಜಿಲ್ಲೆಯ ರಾಜ್ಪುರ ನಿವಾಸಿ 22 ವರ್ಷದ ರಸ್ನೀತ್ ಕೌರ್ಅವರು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 51 ನೇ ರ್ಯಾಂಕ್ ಗಳಿಸಿದ್ದಾರೆ. ರಸ್ನೀತ್ ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆಯನ್ನು ಸಾಧಿಸಿದ್ದಾರೆ. ರಸ್ನೀತ್ ಕೌರ್ ಅವರ ತಂದೆ ಜಸ್ವಿಂದರ್ ಸಿಂಗ್ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್ಪಿಸಿಎಲ್) ನಲ್ಲಿ ಲೈನ್ಮ್ಯಾನ್ ಆಗಿದ್ದರೆ. ಕಷ್ಟದ ಆರ್ಥಿಕ ಪರಿಸ್ಥಿತಿಯ ನಡುವೆಯೂ ತಂದೆ ಮಗಳ ಕನಸಿಗೆ ಸಂಪೂರ್ಣ ಬೆಂಬಲ ನೀಡಿದ್ದರು.
ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಮುಗಿಸಿದ ತಕ್ಷಣವೇ ಅವರು ಸಿವಿಲ್ ಸರ್ವಿಸಸ್ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡರು. ಯಾವುದೇ ದೊಡ್ಡ ಸೌಕರ್ಯಗಳಿಲ್ಲದಿದ್ದರೂ ಕೇವಲ ಕಠಿಣ ಪರಿಶ್ರಮ, ಶಿಸ್ತು ಮತ್ತು ಸರಿಯಾದ ಯೋಜನೆಯಿದ್ದರೆ ದೇಶದ ಅತ್ಯಂತ ಕಠಿಣ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಸುಲಭವಾಗಿ ಭೇದಿಸಬಹುದು ಎಂಬುದನ್ನು ರಸ್ನೀತ್ ಕೌರ್ ಸಾಬೀತುಪಡಿಸಿದ್ದಾರೆ.