ಬೆಂಗಳೂರು, ಜ 04(Daijiworld News/MSP): ಪ್ರಧಾನಿ ನರೇಂದ್ರ ಮೋದಿಗೆ ಬುದ್ದಿಯೂ ಇಲ್ಲ, ಮೆಚ್ಯೂರಿಟಿಯೂ ಇಲ್ಲ ಎಂದು ಬಜರಂಗದಳದ ಮಾಜಿ ಸಂಚಾಲಕ ಹಾಗೂ ಹೋರಾಟಗಾರ ಮಹೇಂದ್ರ ಕುಮಾರ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸಿಎಎ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮೋದಿ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿರುವ ಅವರು, ಪ್ರಧಾನಿ ಮೋದಿಗೆ ಸ್ವಲ್ಪವೂ ಬುದ್ದಿ ಇಲ್ಲ, ಪರಿಪಕ್ವತೆ ಮೊದಲೇ ಇಲ್ಲ, ಅಬ್ದುಲ್ ಕಲಾಂ ಸೇರಿ ಅನೇಕ ಗಣ್ಯರು ತುಮಕೂರಿನಲ್ಲಿರುವ ಶಿವಕುಮಾರ ಸ್ವಾಮೀಜಿ ಅವರ ಸಿದ್ದಗಂಗಾ ಮಠಕ್ಕೆ ಆಗಮಿಸಿ ಮಕ್ಕಳು ದೇಶದ ಆಸ್ತಿ ಎಂದು ಕೊಂಡಾಡಿದ್ದರು. ಆದ್ರೆ ಪಾಕಿಸ್ತಾನ, ಇಮ್ರಾನ್ ಖಾನ್ ಎಂದೆಲ್ಲಾ ಮಾತನಾಡಿ ಹೋಗಿದ್ದಾರೆ.
ಸಿಎಎ ಕಾಯ್ದೆ ಮೂಲಕ ಮುಸ್ಲಿಮರಿಗೆ ಮಾತ್ರ ತೊಂದರೆಯಲ್ಲ ಹಿಂದೂಗಳಿಗೂ ತೊಂದರೆ ಇದೆ. ಅದಿವಾಸಿ, ಕಾಡಿನಲ್ಲಿರುವ ದಲಿತ ಜನರ ಬಳಿ ದಾಖಲೆಗಳಿವೆಯೇ? ಹಿಂದುತ್ವ ಹಿಂದುತ್ವ ಎನ್ನುತ್ತಾ ಹಿಂದುಗಳ ಬುಡಕ್ಕೆ ಕೊಳ್ಳಿ ಇಡುವ ಕೆಲಸ ಶಾ, ಮೋದಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಭಾರತವನ್ನು ವಿವೇಕನಾಂದ , ಮಹಾತ್ಮ ಗಾಂಧಿಯಂತವರು ಕಟ್ಟಿರುವುದು ,ಬದಲಾಗಿ ಪ್ರಧಾನಿ ಮೋದಿ, ಅಮಿತ್ ಶಾ ಕಟ್ಟಿರುವುದಲ್ಲ ಎಂದು ವಾಗ್ದಾಳಿ ನಡೆಸಿದರು.