ಬೆಂಗಳೂರು, ನ.12 (DaijiworldNews/AA): ಬಿಜೆಪಿ ಅವರು ಮೋದಿ ಅಂದ ಕೂಡಲೇ ಗಢಗಢ ಅಂತ ನಡುಗಿ ಹೋಗ್ತಾರೆ. ಜೀವ ಹೋದ್ರೂ ಪರವಾಗಿಲ್ಲ, ಮೋದಿ ಹೈ ತೋ ಮುಮ್ಕಿನ್ ಹೈ ಅಂತಾನೆ ಘೋಷಣೆ ಹೊಡೆದು ಸಾಯೋದು ಇವರೆಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ ಅವರು ಇಷ್ಟೆಲ್ಲ ಬೈಯ್ಯುವ ಬದಲು ನಮ್ಮ ಜೊತೆ ಬರಲಿ ಮೋದಿ ಮುಂದೆ ಹೋಗೋಣ. ಪ್ರಸ್ತಾವನೆ ಇಡೋಣ. ಮೋದಿ ಅಂದ ಕೂಡಲೇ ಬಿಜೆಪಿ ಅವರು ಗಢಗಢ ಅಂತ ನಡುಗಿ ಹೋಗ್ತಾರೆ. ಆಗ ಬಿಜೆಪಿ ಅವರು ಬಾಯಿ ಬಿಚ್ಚಲ್ಲ. ನಮಗೆ ಅನ್ಯಾಯ ಆದ್ರು ಪರವಾಗಿಲ್ಲ. ನಮ್ಮನ್ನು ಸಾಯಿಸಿ ಬಿಟ್ಟರೂ ಪರವಾಗಿಲ್ಲ. ಆದರೆ ಮೋದಿ ಮಹಾನ್ ಹೇ ಅಂತಾರೆ. ನಿಮ್ಮ ಜೀವ ಹೋದ್ರೂ ಪರವಾಗಿಲ್ಲ, ಮೋದಿ ಹೈ ತೋ ಮುಮ್ಕಿನ್ ಹೈ ಅಂತಾನೆ ಘೋಷಣೆ ಹೊಡೆದು ಸಾಯೋದು ಇವರೆಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಖಜಾನೆ ಖಾಲಿ ಆಗಿದೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ಅವರದ್ದು ಅರ್ಥನೇ ಆಗಲ್ಲ. ಹಾಲಿನ ದರ ಏರಿಕೆ ಬಗ್ಗೆ ಪ್ರತಿಭಟನೆ ಮಾಡ್ತಾರೆ ಮಾಡಿ. ನ.11 ರಂದು ಮಹಾರಾಷ್ಟ್ರದಲ್ಲಿ ಅಮೂಲ್ದು ಆಯ್ತು ಅದರದ್ದು ಏನು ವಿಚಾರ? ಪೆಟ್ರೋಲ್-ಡಿಸೇಲ್ ಏರಿಕೆ ಬಗ್ಗೆ ಬಿಜೆಪಿ ಅವರ ವಿಶೇಷ ಟಿಪ್ಪಣಿ ಇಲ್ಲವಾ? ಬೆಲೆ ಏರಿಕೆ 13 ವರ್ಷದಿಂದ ಎಷ್ಟು ಆಗಿದೆ. ನಿತ್ಯ ಬಳಕೆ ವಸ್ತು ದುಬಾರಿ ಆಗ್ತಿದೆ. ಅದರ ಬಗ್ಗೆ ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಬರ ಪರಿಹಾರದ ಕುರಿತು ಮಾತನಾಡಿದ ಅವರು, "ಈಗಾಗಲೇ ಸಿಎಂ, ಕಂದಾಯ ಸಚಿವರು ಲೋಪ ಸರಿಪಡಿಸೋದಾಗಿ ಹೇಳಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ ದೀಪಾವಳಿ ಇದಿದ್ದಕ್ಕೆ ಸಂಪೂರ್ಣವಾಗಿ ಕೆಲಸ ಮಾಡಿರಲಿಲ್ಲ ಅಂತ ಮಾಹಿತಿ ಇದೆ. ಅದನ್ನ ಸರಿ ಮಾಡೋಣ. ನಮ್ಮ ಬಳಿ ಡಾಟಾ ಇದೆ. ಡಿಬಿಟಿ ವ್ಯವಸ್ಥೆ ಇದೆ. ಇದನ್ನ ಮಾಡ್ತೀವಿ. ಡೇಟಾ ಎಂಟ್ರಿ ಸಮಯದಲ್ಲಿ ಏನಾದ್ರು ಆಗಿರುತ್ತದೆ. ಮಾಹಿತಿ ಸರಿ ಇದ್ದರೆ ಎಷ್ಟು ಹಣ ಕೊಡಬೇಕು ಅಂತ ಇದೆಯೋ ಅಷ್ಟು ಕೊಡೋದಾಗಿ ಡಿಸಿಎಂ ಹೇಳಿದ್ದಾರೆ. ಅದನ್ನ ಮಾಡ್ತೀವಿ" ಎಂದು ತಿಳಿಸಿದರು.