ತಮಿಳುನಾಡು. ನ.13 (DaijiworldNews/AK):ಅಪ್ಪನ ಕೆಲಸ ನೋಡಿ ಸ್ಫೂರ್ತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆದ ಯುಕೇಶ್ ಕುಮಾರ್ ಅವರ ಯಶೋಗಾಥೆ.

ಯುಕೇಶ್ ಕುಮಾರ್ ತಮಿಳುನಾಡಿನಲ್ಲಿ ಹುಟ್ಟಿದರೂ ತಂದೆ ಸೇನೆಯಲ್ಲಿ ಇದ್ದಿದ್ದರಿಂದ ಪ್ರಾಥಮಿಕ ಮತ್ತು ಪ್ರೌಢಶಿಣ ಬೇರೆ ಬೇರೆ ಊರಿನಲ್ಲಿ ಶಿಕ್ಷಣ ಪಡೆಯುವಂತಾಯಿತು. ಆದರೆ ಪೂರ್ತಿ ಪ್ರಾಥಮಿಕ ಮತ್ತು ಪ್ರೌಢ ಶಿಣ ಕೇಂದ್ರೀಯ ವಿದ್ಯಾಲಯದಲ್ಲೇ ಪೂರ್ಣಗೊಳಿಸಲಾಯಿತು. ಎನ್ಐಟಿ ನಾಗ್ಪುರದಲ್ಲಿ ಬಿಟೆಕ್ ಕಂಪ್ಯೂಟರ್ ಸೈನ್ಸ್ ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.
ಖಾಸಗಿ ಕಂಪನಿಯಲ್ಲಿ ಇದ್ದಾಗಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 10ನೇ ತರಗತಿಯಲ್ಲಿದ್ದಾಗ ನಾಗರಿಕ ಸೇವೆ ಪರೀಕ್ಷೆ ಬರೆಯಬೇಕು ಎನ್ನುವ ಕನಸು ಇತ್ತಾದರೂ ಕನಸಿಗೆ ನೀರೆರೆದದ್ದು ಪದವಿ ಮುಗಿದ ಮೇಲೆಯೇ ಓದಲು ಆರಂಭಿಸಿದರು. ಆದರೂ ಕಷ್ಟ ಎನಿಸಿದಾಗ ಕಂಪನಿಯಿಂದ ಒಂದು ವರ್ಷದ ರಜೆ ತೆಗೆದುಕೊಂಡು ಸಂಪೂರ್ಣ ಸಮಯ ಓದಲು ಪ್ರಾರಂಭಿಸಿದರು.
2014ರಲ್ಲಿ ಮೊದಲು ಯುಪಿಎಸ್ಸಿ ಪರೀಕ್ಷೆ ಎದುರಿಸಿದರು. ಮೊದಲ ಪ್ರಯತ್ನದಲ್ಲಿ 10 ಅಂಕ ಕಡಿಮೆ ಇದ್ದಿದ್ದರಿಂದ ಲಿಸ್ಟ್ನಲ್ಲಿ ಹೆಸರು ಇರಲಿಲ್ಲ. ನಂತರ ರ್ಯಾಂಕ್ ಬೇಸ್ನಲ್ಲಿ ರೈಲ್ವೆ ಟ್ರಾಫಿಕ್ ಸರ್ವಿಸ್ನಲ್ಲಿ ಕೆಲಸ ಪಡೆದರು. ಕೆಲಸದೊಂದಿಗೆ ಓದು ಮುಂದುವರಿಸಿ ಮತ್ತೆ 2018ರಲ್ಲಿ ಐಎಎಸ್ ತೇರ್ಗಡೆಯಾದರು.