ನವದೆಹಲಿ, ನ.13 (DaijiworldNews/AA): ಪ್ರಧಾನಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ತಮ್ಮ ಬಳಿ ಇದಕ್ಕೆ ಸಂಬಂಧಿಸಿದ ಪುರಾವೆಗಳಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪುರಾವೆ ಈ ಫೋನ್ನಲ್ಲಿದೆ. ಪ್ರಧಾನಿ ನನ್ನ ಫೋನ್ ಟ್ಯಾಪ್ ಮಾಡುತ್ತಿರುವುದರಿಂದ ಅವರಿಗೆ ಈ ವಿಷಯ ಗೊತ್ತಿದೆ. ವಿದೇಶಿ ಶಕ್ತಿಗಳ ಪ್ರಭಾವ, ರಾಷ್ಟ್ರೀಯ ಭದ್ರತೆ, ಚುನಾವಣಾ ಅಕ್ರಮಗಳು ಮತ್ತು ದೇಶದ ರಾಜಕೀಯ ವಿಚಾರಗಳ ಬಗ್ಗೆ ಮುಖಾಮುಖಿ ಚರ್ಚೆಯಾಗಬೇಕು" ಎಂದು ಆಗ್ರಹಿಸಿದ್ದಾರೆ.
ಶುಕ್ರವಾರದ ಇನ್ಸ್ಟಾಗ್ರಾಮ್ ಸಂವಾದದಲ್ಲೂ ಇದೇ ವಿಚಾರವಾಗಿ ಮಾತನಾಡಿದ ಅವರು, "ಸಂಸತ್ತಿನಲ್ಲಿ ತಮಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿದಾಗ ಮೈಕ್ ಸ್ಥಗಿತಗೊಳಿಸಲಾಗಿದೆ. ದೀರ್ಘ ಭಾಷಣಗಳ ಬದಲು ಪ್ರಧಾನಿ ಮತ್ತು ತಾವು ನೇರವಾಗಿ ಪ್ರಶ್ನೆ ಕೇಳುವ, ಉತ್ತರಿಸುವ ರೀತಿಯ ಚರ್ಚೆ ಬಯಸುವುದಾಗಿ" ಎಂದರು.